ಮಹಿಳೆಯರಿಗೆ ಯುವಕನಿಂದ ದೀಪಾವಳಿಗೆ ಗಿಫ್ಟ್

09 Oct 2017 11:12 PM | General
281 Report

ಬೆಂಗಳೂರು: ಬೆಂಗಳೂರಿನ ಆಕರ್ಷ ಶ್ಯಾಮನೂರ್ ಎಂಬ ಯುವಕ 100 ಮಹಿಳಾ ವ್ಯಾಪಾರಿಗಳಿಗೆ ಸೌರ ದೀಪ ನೀಡಲು ಮುಂದಾಗಿದ್ದಾರೆ.

ದೀಪಾವಳಿಯ ಗಿಫ್ಟ್ ಆಗಿ ನೀಡುತ್ತಿರುವ ಈ ಯುವಕ ಬೆಳಕಿನ ಕೊರತೆ ಹಾಗೂ ಸರಿಯಾದ ಬೀದಿ ದೀಪಗಳ ವ್ಯವಸ್ಥೆ ಇಲ್ಲದೇ ಇರುವುದರಿಂದ ರಾತ್ರಿ ವೇಳೆಯಲ್ಲಿ ಮಹಿಳೆಯರು ವ್ಯಾಪಾರ ನಡೆಸಲು ತೊಂದರೆಯಾಗುತ್ತದೆ. ಇದರಿಂದ 500 ರಿಂದ 1000ರದವರೆಗೆ ನಷ್ಟವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಮನೆಯಿಂದ ಗ್ಯಾಸ ಲಾಟೀನ್ ತಂದು ವ್ಯಾಪಾರ ಮಾಡಬೇಕಾಗುತ್ತದೆ. ಅದು ಕೂಡ ಮಂದ ಬೆಳಕಿನಲ್ಲಿ ಈ ಲ್ಯಾಟೀನ್ ತಂದು ಿ್ವ್ಯಾಪಾರ ಮಾಡಬೇಕು. ಈ ಲ್ಯಾಟೀನ್ ಗ್ಯಾಸಗಾಗಿ 250 ರೂಪಾಯಿಗಳ ವೆಚ್ಚವಾಗುತ್ತದೆ. ಇದೇನಾದರೂ ರಿಪೇರಿ ಗೆ ಬಂದರಂತು 500 ಖರ್ಚು ಆಗುತ್ತದೆ. ಬೆಳಕಿನ ಕೊರತೆಯಿಂದ ನಿತ್ಯ 500 ರಿಂದ 1000 ನಷ್ಟವಾಗುತ್ತಿದೆ. ಇದೇ ಸಮಸ್ಯೆಯನ್ನು ಸಾವಿರಾರು ಜನ ಬೀದಿ ವ್ಯಾಪಾರಿಗಳು ಎದುರಿಸುತ್ತಿದ್ದಾರೆ ಎಂದು ಮಂಜುಳಾ ಎಂಬ ವ್ಯಾಪಾರಿ ಹೇಳುತ್ತಾರೆ.

ಈ ಸಮಸ್ಯೆಯನ್ನು ಹೊಗಲಾಡಿಸಲು ಬೆಂಗಳೂರಿನ ಶ್ಯಾಮನೂರ್ ಎಂಬ ಯುವಕ 100 ಮಹಿಳೆಯರಿಗೆ ಪ್ರಖರವಾಗಿ ಕಾಣಲು ಸೌರ ದ್ವೀಪಗಳನ್ನು ನೀಡಲು ಮುಂದಾಗಿದ್ದಾರೆ. ಹಣ್ಣು ಹಾಗೂ ಹೂ ಮಾರುವ 100 ಮಹಿಳೆಯರನ್ನು ಗುರುತಿಸಿದೆ. ಕತ್ತಲಲ್ಲಿ ವ್ಯಾಪಾರ ನಡೆಸುವ ಅವರಿಗೆ ಸೌರ ದೀಪ ನೀಡುವುದು ಆಕರ್ಷ ಶ್ಯಾಮನೂರ್ ಉದ್ದೇಶ.

 

 

 

Edited By

venki swamy

Reported By

Sudha Ujja

Comments