ಕೋಟಿ ರೂ. ಬಹುಮಾನ ಗೆದ್ದ ಸ್ಪರ್ಧಿಗೆ ಬಿಗ್ ಬಿ ಸಲಹೆ !

04 Oct 2017 12:05 PM | General
365 Report

ನಟ ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದ 9ನೇ ಆವೃತ್ತಿಯಲ್ಲಿ ಅನಾಮಿಕಾ ಮಜುಮ್ದಾರ್ ಎಂಬ ಮಹಿಳೆ 1 ಕೋಟಿ ರೂಪಾಯಿ ಗೆದ್ದಿದ್ದಾರೆ. ಸ್ಪರ್ಧೆಯಲ್ಲಿ ಗೆದ್ದ 1 ಕೋಟಿ ರೂಪಾಯಿಯನ್ನು ಅತ್ಯಂತ ಬುದ್ಧಿವಂತಿಕೆಯಿಂದ ಬಳಸುವಂತೆ ಖುದ್ದು ಬಿಗ್ ಬಿ ಅನಾಮಿಕಾಗೆ ಸಲಹೆ ನೀಡಿದ್ದಾರಂತೆ.

ಅನಾಮಿಕ ಜಾರ್ಖಂಡ್ ಮೂಲದ ಎನ್ ಜಿ ಓ ಕಾರ್ಯಕರ್ತೆಗೆ ಬಿಗ್ ಬಿ ಕೋಟಿ ಗೆದ್ದಿರುವ ಈ ಉತ್ಸಾಹ ಕಡಿಮೆಯಾದ ಬಳಿಕ ಹಣವನ್ನು ಏನು ಮಾಡಬೇಕೆಂದು ಯೋಚಿಸಿ , ಆತುರದಲ್ಲಿ ನಿರ್ಧಾರ ತೆಗೆದುಕೊಳ್ಳಬೇಡಿ ಎಂದಿದ್ದಾರಂತೆ. ಕೂಡಲೇ ಹಣವನ್ನು ಖರ್ಚು ಮಾಡಬೇಕು ಅನ್ನೋ ಆತುರ ಕೂಡ ಅನಾಮಿಕಾ ಮನಸ್ಸಿನಲ್ಲಿ ಬಂದಿತ್ತಂತೆ. ಆದ್ರೆ ಅಮಿತಾಭ್ ಬಚ್ಚನ್ ಸಲಹೆಯ ನಂತರ ಅನಾಮಿಕಾ ಕೂಡ ಹಣವನ್ನು ಜನರಿಗಾಗಿ ಉಪಯೋಗಿಸಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.

Edited By

Suresh M

Reported By

Madhu shree

Comments