ಬಲು ಅಪರೂಪದ ನಾಗರ ಹಾವು !

03 Oct 2017 5:23 PM | General
310 Report

ಸಾಮಾನ್ಯವಾಗಿ ನಾಗರ ಹಾವಿನ ಹೆಡೆಯ ಮೇಲೆ ಕನ್ನಡಕದಂತೆ ರೇಖೆಗಳು ಮೂಡಿರುತ್ತದೆ. ಇಲ್ಲವೇ ಹೆಡೆಯ ಭಾಗದಲ್ಲಿ ಎರಡು ಕಪ್ಪು ಮಚ್ಚೆಯಂತೆ ಆಕೃತಿ ಮೂಡುವುದು ಸಾಮಾನ್ಯವಾಗಿರುತ್ತದೆ. ಇವೆಲ್ಲವನ್ನೂ ಹೊರತುಪಡಿಸಿ ಹೆಡೆಯ ಮೇಲೆ ಗರುಡನ ಆಕೃತಿ ಮೂಡಿರುವ ಈ ನಾಗರಹಾವು ಬಲು ಅಪರೂಪದ್ದಾಗಿದೆ.

ನಾಗರ ಹಾವಿನ ತಲೆಯ ಮೇಲೆ ಗರುಡನ ಚಿತ್ರ ಮೂಡಿರುವ ಅಪರೂಪದ ಹಾವೊಂದು ಕಾರವಾರ ತಾಲೂಕಿನ ಆವರ್ಸಾದ ಸಚಿನ್ ನಾಯ್ಕ ರವರ ಮನೆಯಲ್ಲಿ ಪ್ರತ್ಯಕ್ಷವಾಗುವ ಮೂಲಕ ಜನರ ಕುತೂಹಲಕ್ಕೆ ಕಾರಣವಾಗಿದೆ. ಇನ್ನು ಮನೆಗೆ ಆಗಮಿಸಿದ್ದ ಈ ವಿಶೇಷ ನಾಗರಹಾವನ್ನು ಉರಗ ತಜ್ಞ ಮಹೇಶ್ ನಾಯ್ಕ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

Edited By

Suresh M

Reported By

Madhu shree

Comments