ಸ್ವಚ್ಚ ಭಾರತದ ಅಭಿಯಾನದ ಗುರಿ ತಲುಪಬೇಕಾದರೆ ಯಾರ ಅಗತ್ಯವಿದೆ? 125 ಕೋಟಿ ಭಾರತೀಯರು ಒಗ್ಗೂಡಬೇಕು, ಮೋದಿ ಕರೆ

ನವದೆಹಲಿ : ಮಹತ್ಮಾ ಗಾಂಧಿ ಜಯಂತಿ ದಿನದಂದು, ಹಾಗೂ ಸ್ವಚ್ಛ ಭಾರತ ಅಭಿಯಾನ ಮೂರು ವರ್ಷ ಪೂರೈಸಿರುವ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ ಈ ಕುರಿತು ಮಾತನಾಡಿದ್ದಾರೆ.
ನವದೆಹಲಿ : ಮಹತ್ಮಾ ಗಾಂಧಿ ಜಯಂತಿ ದಿನದಂದು, ಹಾಗೂ ಸ್ವಚ್ಛ ಭಾರತ ಅಭಿಯಾನ ಮೂರು ವರ್ಷ ಪೂರೈಸಿರುವ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ ಈ ಕುರಿತು ಮಾತನಾಡಿದ್ದಾರೆ. ಸ್ಚಚ್ಛ ಭಾರತ ಅಭಿಯಾನದ ಗುರಿ ಈಡೇರಬೇಕಾದರೆ 125 ಕೋಟಿ ಜನರ ಅಗತ್ಯವಿದೆ ಎಂದು ಮೋದಿ ತಿಳಿಸಿದ್ದಾರೆ.
ಸ್ಚಚ್ಛ ಭಾರತ ಅಭಿಯಾನಕ್ಕೆ ಮೂರು ವರ್ಷ ಪೂರ್ಣಗೊಂಡಿರುವ ದೆಹಲಿಯ ವಿಜ್ಞಾನ ಭವನದಲ್ಲಿ ಮಾತನಾಡಿರುವ ಅವರು, 125 ಕೋಟಿ ಭಾರತೀಯರು ಸ್ಚಚ್ಛ ಭಾರತ ಅಭಿಯಾನವನ್ನು ಹೃದಯದಿಂದ ಒಪ್ಪಿಕೊಂಡಿದ್ದಾರೆ. ಸ್ಚಚ್ಛ ಭಾರತದ ಅಭಿಯಾನ ಇದೀಗ ಜನರ ಅಭಿಯಾನವಾಗಿದೆ. 1000 ಮಹಾತ್ಮ ಗಾಂಧಿ, 1 ಲಕ್ಷ ನರೇಂದ್ರ ಮೋದಿ, ಎಲ್ಲಾ ಸರ್ಕಾರ ಎಲ್ಲಾ ಮುಖ್ಯಮಂತ್ರಿಗಳು ಒಟ್ಟಿಗೆ ಸೇರಿದರು ಸ್ಚಚ್ಛ ಭಾರತದ ಕನಸು ನನಸಾಗುವುದಿಲ್ಲ, ಈ ಕನಸು ನನಸಾಗಬೇಕಾದರೆ 125 ಕೋಟಿ ಭಾರತೀಯರು ಕೈ ಜೋಡಿಸಬೇಕು ಎಂದು ಹೇಳಿದರು.
Comments