ಹಾಯ್ ಬೆಂಗಳೂರು ಪತ್ರಿಕೆಯನ್ನು ನಿಲ್ಲಿಸಲಿದ್ದಾರಂತೆ ರವಿ ಬೆಳಗೆರೆ



ಸೆಪ್ಟೆಂಬರ್ 25ಕ್ಕೆ ಇಪ್ಪತ್ತೆರಡು ವರ್ಷ ಪೂರೈಸಿದ 'ಹಾಯ್ ಬೆಂಗಳೂರ್!' ವಾರಪತ್ರಿಕೆಯನ್ನು ನಿಲ್ಲಿಸುವ ಮಾತನಾಡಿದ್ದಾರೆ ಐವತ್ತೊಂಬತ್ತು ವರ್ಷದ ಹಿರಿಯ ಪತ್ರಕರ್ತ ರವಿ ಬೆಳಗೆರೆ. 'ಆದರೆ ಓ ಮನಸೇ ಮುಂದುವರಿಸಿಕೊಂಡು ಹೋಗ್ತೀನಿ' ಎಂಬ ಮಾತು ಹೇಳಿ ಓದುಗರಿಗೆ ಸಮಾಧಾನವನ್ನೂ ತಂದಿದ್ದಾರೆ.
ನನ್ನ ಜೀವನಕ್ಕೆ ತಿರುವು ಕೊಟ್ಟ, ನನ್ನನ್ನು ಸಾಕಿ-ಸಲುಹಿದ, ಅಪಾರ ಅಭಿಮಾನಿಗಳನ್ನು ಸೃಷ್ಟಿಸಿದ ಕಪ್ಪು ಸುಂದರಿ 'ಹಾಯ್ ಬೆಂಗಳೂರ್!' ಪತ್ರಿಕೆಯನ್ನು ನಿಲ್ಲಿಸುವುದಕ್ಕೆ ನಿರ್ಧಾರ ಮಾಡಿದ್ದೀನಿ!'
ಹೀಗೆಂದು ಖ್ಯಾತ ಪತ್ರಕರ್ತ ರವಿ ಬೆಳಗೆರೆ ಹೇಳುವಾಗ ಅವರ ಕೊರಳುಬ್ಬಿಬಂದಿತ್ತು, ಏನನ್ನೋ ಕಳೆದುಕೊಳ್ಳುತ್ತಿದ್ದೀನಲ್ಲ ಎಂಬ ಗಾಢವಾದ ಭಾವ ಅವರ ಕಣ್ಣುಗಳಲ್ಲಿ ಮನೆಮಾಡಿತ್ತು. ಇನ್ನು, ಕಳೆದ 22 ವರ್ಷಗಳಿಂದ ಪ್ರತಿವಾರ ಈ ಪತ್ರಿಕೆಗಾಗಿ ಕಾಯುತ್ತಿದ್ದ ಅವರ ಅಭಿಮಾನಿಗಳಿಗೆ ಈ ಸುದ್ದಿ ಕೇಳಿ ಏನಾಗಬೇಡ?
ಪತ್ರಿಕೆ ನಿಲ್ಲಿಸುವ ಹಿಂದಿನ 5 ಕಾರಣಗಳನ್ನು ರವಿ ಬೆಳಗೆರೆ ತಿಳಿಸಿರುವುದು ಹೀಗೆ ಈ ವರ್ಷದ ಮಾರ್ಚ್ ಹದಿನೈದಕ್ಕೆ ನನಗೆ ಅರವತ್ತು ವರ್ಷ ತುಂಬುತ್ತದೆ. ಬೀದರ್ ನಲ್ಲಿ ಯಾರೋ ಹತ್ತು ರುಪಾಯಿ ದುಡ್ಡು ತಿಂದ ಅನ್ನೋವಂಥದ್ದನ್ನೇ ಎಷ್ಟು ವರ್ಷ ಬರೆದುಕೊಂಡು ಕೂತುಕೊಳ್ಳಲಿ? ತುಂಬ ತೂಕವಾದದ್ದನ್ನು, ಮನಸ್ಸಿಗೆ ತಾಕುವುದನ್ನು ಬರೆಯಬೇಕಿದೆ.ಜತೆಗೆ ನನಗೆ ಸಂಗೀತ ಅಂದರೆ ಅಚ್ಚುಮೆಚ್ಚು. ಅದರಲ್ಲೂ ಸಿನಿಮಾ ಸಂಗೀತ ಕೇಳಬೇಕು. ಇವೆಲ್ಲದರ ಜತೆಗೆ ಅನುವಾದ ಮಾಡುವುದಕ್ಕೆ ಅಂತಲೇ ಹಕ್ಕುಗಳನ್ನು ತಂದ ಪುಸ್ತಕಗಳು ಸಾಕಷ್ಟಿವೆ. ಅವುಗಳ ಅನುವಾದ ಮಾಡಬೇಕು.ಓ ಮನಸೇಗೆ ಸಮಯ ಕೊಡಬೇಕು. ನನ್ನ ಮಕ್ಕಳ ಜತೆಗೆ ಹಾಗೂ ಮೊಮ್ಮಕ್ಕಳ ಜತೆಗೆ ಸಮಯ ಕಳೆಯಬೇಕಿದೆ.ಓದುಗರಿಗೆ ಇನ್ನೂ ಹೆಚ್ಚಿನದನ್ನು ಕೊಡುವುದಕ್ಕೆ ಅಂತಲೇ ಸಮಯ ಮೀಸಲಿಡಬೇಕು ಅಂತ ಈ ನಿರ್ಧಾರ ಮಾಡಿದ್ದೇನೆ ಎಂದರು.
Comments