ಇನ್ಮುಂದೆ ಬೀದಿಗೆ ಕಸ ಎಸೆದ್ರೆ ದಂಡ ಗ್ಯಾರಂಟಿ...!

27 Sep 2017 4:38 PM | General
343 Report

ರಸ್ತೆಗೆ ಕಸ ಸುರಿದು ಪರಿಸರ ಹಾಳು ಮಾಡುವುದನ್ನು ತಡೆಯಲು, ಚಿತ್ರದುರ್ಗ ನಗರದ 25 ವಾರ್ಡ್ಗಳಲ್ಲಿಯ ನಿವಾಸಿಗಳು ಬೀದಿಯಲ್ಲಿ ಕಸ ಹಾಕುತ್ತಿದ್ದರು. ಇದೇ ಮೊದಲ ಬಾರಿ ನಗರಸಭೆ ಸಿಬ್ಬಂದಿ ನೂರು ರೂ.ಗಳ ದಂಡ ಹಾಕುವ ಮೂಲಕ ಮತ್ತೊಮ್ಮೆ ಬೀದಿಗೆ ಕಸ ಎಸೆದೀರಿ ಜೋಕೆ ಎನ್ನುವ ಎಚ್ಚರಿಕೆಯ ಸಂದೇಶವನ್ನು ಸಾರ್ವಜನಿಕರಿಗೆ ರವಾನಿಸಿದೆ.

ಪ್ರತಿದಿನ ಬೆಳಿಗ್ಗೆ ಮನೆ ಮನೆಗೆ ಹೋಗಿ ನಗರಸಭೆ ವಾಹನಗಳು ಕಸ ಸಂಗ್ರಹಿಸುತ್ತಿದ್ದರು. ಜೆ.ಸಿ.ಆರ್.ಬಡಾವಣೆಯಲ್ಲಿರುವ ಅರಣ್ಯ ಇಲಾಖೆಯ ಕಾಂಪೌಂಡ್ ಗೋಡೆ ಮೇಲೆ ಮಾಲಿನ್ಯ ಅಳಿಸಿ ಪರಿಸರ ಉಳಿಸಿ ಎಂಬ ಸಂದೇಶ ಬರೆದಿರುವುದನ್ನು ಲೆಕ್ಕಿಸದೆ ಅಲ್ಲಿಯೇ ಕಸದ ರಾಶಿ ಹರಡಿದ್ದ ನಾಗರಾಜ್ ಮತ್ತೊಬ್ಬರಿಗೆ ಹಾಗೂ ಹಿಮ್ಮತ್ನಗರ, ಹೊಳಲ್ಕೆರೆ ರಸ್ತೆಯಲ್ಲಿ ತಲಾ ಒಬ್ಬರಿಗೆ ಒಟ್ಟು ನಾಲ್ವರಿಗೆ ನೂರು ನೂರು ರೂ.ಗಳ ದಂಡ ವಿಧಿಸಿ ಇನ್ನು ಮುಂದೆ ನಿಮ್ಮ ಮನೆ ಬಾಗಿಲಿಗೆ ಬರುವ ನಗರಸಭೆ ವಾಹನಗಳಲ್ಲಿಯೇ ಕಸವನ್ನು ಸುರಿಯಬೇಕು ಎಂದು ನಗರಸಭೆ ಸಿಬ್ಬಂದಿ ತಾಕೀತು ಮಾಡಿದರು.
ನಗರಸಭೆ ಪೌರಾಯುಕ್ತರಾದ ಚಂದ್ರಪ್ಪ, ಹೆಲ್ತ್‌ಇನ್ಸ್ಪೆಕ್ಟರ್ಗಳಾದ ಕಾಂತರಾಜ್, ಸರಳ, ಭಾರತಿ, ಅಶೋಕ, ಮಂಜುನಾಥ್ ಈ ಸಂದರ್ಭದಲ್ಲಿ ಹಾಜರಿದ್ದರು.

Edited By

Hema Latha

Reported By

Madhu shree

Comments