ಟೊಮೊಟೊ ಬೆಲೆ 300ಕ್ಕೆ ಏರಿದರು ಭಾರತದ ಟೊಮೆಟೋ ಬೇಡವೆಂದ ಪಾಕ್!

27 Sep 2017 12:06 PM | General
350 Report

ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ಪ್ರಮುಖ ತರಕಾರಿಯಾಗಿರುವ ಟೊಮೆಟೋ ಬೆಲೆ ಬರೋಬ್ಬರಿ ರೂ.300ಕ್ಕೆ ಏರಿಕೆಯಾಗಿದೆ. ಇಷ್ಟು ದಿನ ಟೊಮೆಟೋ ಹಾಗೂ ಈರುಳ್ಳಿಯನ್ನು ಭಾರತದಿಂದ ಆಮದು ಮಾಡಿಕೊಂಡು ಸಮಸ್ಯೆಯನ್ನು ಸರಿದೂಗಿಸಿಕೊಳ್ಳುತ್ತಿದ್ದ ಪಾಕಿಸ್ತಾನ ಇದೀಗ ಭಾರತದಿಂದ ಟೊಮೆಟೋವನ್ನು ಆಮದು ಮಾಡಿಕೊಳ್ಳುವುದಿಲ್ಲ ಎಂದು ಹೇಳಲು ಆರಂಭಿಸಿದೆ.

ಕದನ ವಿರಾಮ ಉಲ್ಲಂಘನೆ, ಉಗ್ರರ ನುಸುಳುವಿಕೆಯಂತಹ ಚಟುವಟಿಕೆಗಳಿಂದಾಗಿ ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸಂಬಂಧ ಹಳಸಿದ್ದು, ಈ ನಡುವೆಯೇ ನೆರೆ ರಾಷ್ಟ್ರ ಪಾಕಿಸ್ತಾನ ಪ್ರಮುಖ ಸಂಕಷ್ಟವೊಂದಕ್ಕೆ ಸಿಲುಕಿಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಲ್ಲಿನ ಆಹಾರ ಭದ್ರತಾ ಸಚಿವ ಸಿಕಂದರ್ ಹಯಾತ್ ಬೋಸನ್ ಅವರು, ರಾಷ್ಟ್ರದಲ್ಲಿ ಉದ್ಭವವಾಗಿರುವ ಟೊಮೆಟೋ ಮತ್ತು ಈರುಳ್ಳಿ ಕೊರತೆ ಶೀಘ್ರದಲ್ಲಿಯೇ ಪರಿಹಾರವಾಗಲಿದೆ. ಆದರೆ, ಭಾರತದಿಂದ ಮಾತ್ರ ತರಕಾರಿ, ವಸ್ತುಗಳನ್ನು ಆಮದು ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಇದೇ ಕಾರಣಕ್ಕಾಗಿ ಲಾಹೋರ್, ಪಂಜಾಬ್ ಪ್ರಾಂತ್ಯ ಮತ್ತು ಇತರ ಪ್ರದೇಶಗಳಲ್ಲಿ ಪ್ರತಿ ಕೆಜಿ ಟೊಮೆಟೋಗೆ ರೂ.300ಗೆ ಏರಿಕೆಯಾಗಿದೆ ಎಂಡು ಡಾನ್ ದೈನಿಕ ವರದಿ ಮಾಡಿದೆ.

Edited By

Hema Latha

Reported By

Madhu shree

Comments