ವೃದ್ದಾಪ್ಯ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ರಾಜಕುಮಾರ

26 Sep 2017 11:36 AM | General
395 Report

79 ವರ್ಷಗಳ ಹಿಂದೆ ಪದವಿ ಪೂರೈಸಿದ್ದ ರಾಜ್ಕುಮಾರ್ ಸ್ನಾತಕೋತ್ತರ ಪದವಿ ಪಡೆಯಬೇಕೆನ್ನುವ ಕನಸು ಕಟ್ಟಿಕೊಂಡಿದ್ದರು. ತನ್ನ ಸೊಸೆಯ ಸಹಾಯದಿಂದಾಗಿ ನಳಂದ ಮುಕ್ತ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ರಾಜ್ಕುಮಾರ್ ಸ್ನಾತಕೋತ್ತರ ಪದವಿ ಪೂರೈಸುವ ಮೂಲಕ ತನ್ನ ದೀರ್ಘಕಾಲದ ಕನಸು ಈಡೇರಿಸಿಕೊಂಡಿದ್ದಾರೆ.

ನಮ್ಮ ದೇಶ ಸ್ವಾತಂತ್ರ ಪಡೆದ ಸಂದರ್ಭದಲ್ಲಿ ಗರಿಬಿ ಹಠಾವೋ(ಬಡತನ ನಿವಾರಿಸಿ) ಎಂಬ ಘೋಷಣೆಯನ್ನು ಕೇಳಿದ್ದೆ. ಈಗಲೂ ಆ ಘೋಷಣೆ ಕೇಳುತ್ತಿದ್ದೇನೆ. ನನ್ನ ಮಗನ ಬಳಿ ಕ್ಯಾಮರಾವನ್ನು ಪಡೆದು ಕೊಳಗೇರಿ ಹಾಗೂ ಬಡತನದ ಕೆಲವು ಚಿತ್ರಗಳನ್ನು ತೆಗೆದು, ಲೇಖನವನ್ನು ಬರೆದು ದಿನಪತ್ರಿಕೆಗಳಿಗೆ ಕಳುಹಿಸಿಕೊಡುವೆ. ಭಾರತದ ಬಡತನದ ಬಗ್ಗೆ ಕವನ ಬರೆಯಬೇಕೆಂಬ ಬಯಕೆಯೂ ಇದೆ'' ಎಂದು ರಾಜ್ಕುಮಾರ್ ಹೇಳುತ್ತಾರೆ. 1920ರ ಎಪ್ರಿಲ್ 1 ರಂದು ಉತ್ತರಪ್ರದೇಶದ ಬರೇಲಿಯಲ್ಲಿ ಜನಿಸಿದ್ದ ರಾಜ್ಕುಮಾರ್ 1934ರಲ್ಲಿ ಮೆಟ್ರಿಕ್ಯುಲೇಶನ್ ಪರೀಕ್ಷೆಯನ್ನು ಪಾಸಾಗಿದ್ದರು. 1938ರಲ್ಲಿ ಅರ್ಥಶಾಸ್ತ್ರದಲ್ಲಿ ಆಗ್ರಾ ವಿವಿಯಿಂದ ಪದವಿ ಪೂರ್ಣಗೊಳಿಸಿದ್ದರು. 1940ರಲ್ಲಿ ಎಲ್‌ಎಲ್ಬಿಯನ್ನು ಪೂರೈಸಿದ್ದರು.''ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಪಾಸಾಗಿರುವ ಎಲ್ಲ ಶ್ರೇಯಸ್ಸು ತನ್ನ ಸೊಸೆ, ಪಾಟ್ನಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ, ಭಾರತಿ ಎಸ್. ಕುಮಾರಿಗೆ ಸಲ್ಲಬೇಕು'' ಎಂದು ರಾಜ್ಕುಮಾರ್ ಹೇಳಿದ್ದಾರೆ.ಯುನಿವರ್ಸಿಟಿ ಇತಿಹಾಸದಲ್ಲಿ ಇದೊಂದು ಸುವರ್ಣ ದಿನವಾಗಿದೆ ಎಂದು ನಳಂದಾ ವಿಶ್ವವಿದ್ಯಾಲಯದ ಉಪ ಕುಲಪತಿ ಎಸ್.ಪಿ. ಸಿನ್ಹಾ ಹೇಳಿದ್ದಾರೆ.

Edited By

Hema Latha

Reported By

Madhu shree

Comments