ಬಿಎಸ್ವೈಗೆ ಎಸಿಬಿಯಿಂದ ಮತ್ತೊಂದು ಶಾಕ್ …!!

26 Sep 2017 11:18 AM | General
461 Report

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪಗೆ ಮತ್ತೊಮ್ಮೆ ಬಿಗ್ ಶಾಕ್ ನೀಡಲು ಎಸಿಬಿ ತಯಾರಿ ನಡೆಸುತ್ತಿದೆ.

ಶಿವರಾಮ್‍ಕಾರಂತ್ ಬಡವಾಣೆಯ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಲು ಎಸಿಬಿ ನಿರ್ಧರಿಸಿದೆ. ಈ ಬಗ್ಗೆ ಕಾನೂನು ಅಭಿಪ್ರಾಯ ಪಡೆದಿರೋ ಎಸಿಬಿ, ಮುಖ್ಯಮಂತ್ರಿಗಳು ಮತ್ತು ಗೃಹಸಚಿವರ ಬಳಿ ಒಂದು ಸುತ್ತಿನ ಮಾತುಕತೆ ನಡೆಸಿದೆ.

ಇದೇ ವಾರದಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧಾರ ಮಾಡಲಾಗಿದೆ. ಹೈಕೋರ್ಟ್ ನೀಡಿರೋ ತಡೆಯಾಜ್ಞೆ ತೆರವುಗೊಳಿಸುವಂತೆ ಮೇಲ್ಮನವಿ ಸಲ್ಲಿಸಲಿದೆ. ಈಗಾಗಲೇ ಒಂದು ಹಂತದಲ್ಲಿ ತನಿಖೆ ಮಾಡಲಾಗಿದೆ. ಈ ಹಂತದಲ್ಲಿ ತಡೆಯಾಜ್ಞೆ ನೀಡಿರೋದು ಸರಿಯಲ್ಲ.

ಅಷ್ಟೇ ಅಲ್ಲದೆ ಆರೋಪಿತರು ತುಂಬಾ ಪ್ರಭಾವಿ ವ್ಯಕ್ತಿ. ಸಾಕ್ಷಿಗಳಿಗೆ ಬೆದರಿಕೆ ಹಾಗು ದಾಖಲಾತಿಗಳನ್ನು ನಾಶ ಮಾಡೋ ಸಾಧ್ಯತೆಯಿದೆ. ಹಾಗಾಗಿ ಹೆಚ್ಚಿನ ತನಿಖೆ ಮಾಡೋ ಅಗತ್ಯವಿದೆ. ಕೂಡಲೇ ತಡೆಯಾಜ್ಞೆ ತೆರುವುಗೊಳಿಸಬೇಕು ಅಂತ ಅರ್ಜಿ ಸಲ್ಲಿಸಲಿದೆ.

Edited By

Shruthi G

Reported By

Shruthi G

Comments