ಮೊಬೈಲ್ IMEI ನಂಬರ್ ಬದಲಾವಣೆ ಮಾಡಿದವರಗೆ ಜೈಲು ಖಾಯಂ

25 Sep 2017 1:07 PM | General
352 Report

ಮೊಬೈಲ್ ಕಳ್ಳತನದ ಜೊತೆಗೆ ನಕಲಿ IMEI ಬಳಕೆದಾರರ ಸಂಖ್ಯೆ ಹೆಚ್ಚಿದೆ. ಮೂಲಗಳ ಪ್ರಕಾರ 18 ಸಾವಿರ ಹ್ಯಾಂಡ್ ಸೆಟ್ ಗಳಿಗೆ ಒಂದೇ IMEI ನಂಬರ್ ಇದೆ. IMEI ತಿದ್ದುಪಡಿ ವಿರುದ್ಧ ಕಾನೂನು ಕ್ರಮ ಶುರುವಾದಲ್ಲಿ ನಕಲಿ IMEI ತಯಾರಕರ ಬಗ್ಗೆ ಮಾಹಿತಿ ಲಭ್ಯವಾಗಲಿದೆ.

ಇನ್ನೊಂದು ಹೊಸ ವ್ಯವಸ್ಥೆಯನ್ನೂ ಜಾರಿಗೆ ತರಲಾಗ್ತಿದೆ. ಕಳ್ಳತನವಾದ ಮೊಬೈಲ್ ನ ಎಲ್ಲ ಸೇವೆಯನ್ನು ರದ್ದುಗೊಳಿಸಲಾಗುವುದು. ಮೊಬೈಲ್ ಸಿಮ್ ಹಾಗೂ IMEI ನಂಬರ್ ಬದಲಾಯಿಸಿದ್ದರೂ ಮೊಬೈಲ್ ಸೇವೆ ರದ್ದುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಸರ್ಕಾರ ಮೊಬೈಲ್ ನ IMEI ನಂಬರ್ ತಿದ್ದುಪಡಿ ಮಾಡುವುದನ್ನು ಅಪರಾಧವೆಂದು ಪರಿಗಣಿಸಿದೆ. ತಿದ್ದುಪಡಿ ಸಾಬೀತಾದಲ್ಲಿ ಮೂರು ವರ್ಷಗಳ ಶಿಕ್ಷೆ ವಿಧಿಸಲು ನಿರ್ಧರಿಸಿದೆ. ಮೊಬೈಲ್ ಕಳವು ಪ್ರಕರಣ ತಪ್ಪಿಸುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ. IMEI ಮೊಬೈಲ್ ನ ವಿಶಿಷ್ಠ ಡಿಜಿಟಲ್ ಸಂಖ್ಯೆಯಾಗಿರುತ್ತದೆ. ಇದು 15 ಅಂಕೆಗಳನ್ನು ಹೊಂದಿರುತ್ತದೆ. ಕಳೆದು ಹೋದ ಮೊಬೈಲ್ ಪತ್ತೆಗೆ ಈ ನಂಬರ್ ಸಹಾಯವಾಗಲಿದೆ. IMEI ನಂಬರ್ ತಿದ್ದುಪಡಿ ವಿಚಾರಕ್ಕೆ ಸಂಬಂಧಿಸಿದಂತೆ ದೂರಸಂಪರ್ಕ ಇಲಾಖೆ ಅಧಿಸೂಚನೆ ಹೊರಡಿಸಿದೆ. IMEI ಸಂಖ್ಯೆಯನ್ನು ಉದ್ದೇಶಪೂರ್ವಕವಾಗಿ ತಿದ್ದುಪಡಿ ಮಾಡುವುದು, ನಂಬರ್ ಬದಲಾವಣೆ ಮಾಡುವುದು ಕಾನೂನು ಬಾಹಿರವೆಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

Edited By

Hema Latha

Reported By

Madhu shree

Comments