ಸಚಿವ ಎಚ್.ಆಂಜನೇಯಗೆ ಬಾಲಕಿ ಹಾಕಿದ ಸವಾಲ್ ಏನು ಗೊತ್ತಾ?

23 Sep 2017 3:58 PM | General
413 Report

ಚಿತ್ರದುರ್ಗ: ಸರ್ಕಾರಿ ಶಾಲೆಗಳಲ್ಲಿ ಮೊದಲು ಸೂಕ್ತ ಸೌಲಭ್ಯ ಒದಗಿಸಿ, ನಂತರ ನಾನೂ ಸರ್ಕಾರಿ ಶಾಲೆ ಸೇರುತ್ತೇನೆ ಎಂದು ಚಿತ್ರದುರ್ಗದ ಹೈಸ್ಕೂಲ್ ವಿದ್ಯಾರ್ಥಿನಿಯೊಬ್ಬಳು ಸಮಾಜ ಕಲ್ಯಾಣ ಸಚಿವ ಹಾಗೂ ಜಿಲ್ಲ ಉಸ್ತುವಾರಿ ಸಚಿವ ಎಚ್ ಆಂಜನೇಯ ಅವರಿಗೆ ಬಹಿರಂಗ ಸವಾಲು ಹಾಕಿದ ಘಟನೆ ಶುಕ್ರವಾರ ನಡೆದಿದೆ.

'ಸಚಿವರು ಸರ್ಕಾರಿ ಶಾಲೆಗಳನ್ನು ಉಳಿಸಿ ಅಂತ ಭಾಷಣ ಮಾಡಿದರೆ ಸಾಲದು. ಸರ್ಕಾರಿ ಶಾಲೆಗಳಿಗೆ ಖಾಸಗಿ ಶಾಲೆಗಳಂತೆ ಮೂಲ ಸೌಲಭ್ಯ ಕಲ್ಪಿಸಿ, ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳ ಮಕ್ಕಳನ್ನು ಆ ಶಾಲೆಗೆ ಸೇರಿಸಿದರೆ, ನಾನು ಕೂಡ ಅಲ್ಲಿಗೆ ಸೇರುತ್ತೇನೆ’ ಹೀಗೆ ಕಡ್ಡಿ ಮುರಿದಂತೆ ಮಾತನಾಡಿ, ಸಚಿವ ಎಚ್. ಆಂಜನೇಯ ಅವರಿಗೆ ಸವಾಲು ಹಾಕಿದ ವಿದ್ಯಾರ್ಥಿನಿ ಹೆಸರು ನಯನಾ ಜೋಗಿ. ಈಕೆ ಖಾಸಗಿ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿನಿ.

ಸಚಿವ ಆಂಜನೇಯ ಅವರು ಜಿಲ್ಲಾ ಮಟ್ಟದ ‘ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ’ದಲ್ಲಿ ಸರ್ಕಾರಿ ಶಾಲೆ ಉಳಿಸಬೇಕು’ ಎಂದು ಹೇಳಿಕೆ ನೀಡಿ ವೇದಿಕೆಯಿಂದ ಕೆಳಗಿಳಿಯುತ್ತಿರುವಾಗ, ಅವರನ್ನು ತಡೆದು ನಿಲ್ಲಿಸಿದ ನಯನಾ, ಈ ರೀತಿ ಸವಾಲು ಹಾಕಿದಳು.

‘ನನಗೂ ಸರ್ಕಾರಿ ಶಾಲೆಗೆ ಸೇರಲು ಇಷ್ಟ. ಆದರೆ, ಅಲ್ಲಿ ಸೌಲಭ್ಯಗಳಿಲ್ಲ. ಸರ್ಕಾರಿ ಶಾಲೆಗೆ ಉತ್ತಮ ಸೌಲಭ್ಯ ಕೊಡಿಸಿ. ನಾನು ಮಾತ್ರವಲ್ಲ, ನನ್ನ ಮೂವತ್ತು ಸ್ನೇಹಿತೆಯರ ಜತೆಗೂಡಿ ಸರ್ಕಾರಿ ಶಾಲೆಗೆ ಸೇರುತ್ತೇವೆ’ ಎಂದು ಹೇಳಿದಳು.

Edited By

Shruthi G

Reported By

Shruthi G

Comments