ಅಮೆಜಾನ್ ನಲ್ಲಿ ಶಾಪಿಂಗ್ ಮಾಡಿ ಬೆರಗು ಮೂಡಿಸಿರುವ ಗಿಳಿ

21 Sep 2017 4:17 PM | General
417 Report

ಲಂಡನ್ ನಲ್ಲಿ ಗಿಳಿಯೊಂದು ಸ್ವನಿಯಂತ್ರಿತ ಸ್ಮಾರ್ಟ್ ಸ್ಪೀಕರ್ ನಲ್ಲಿ ತನ್ನ ಮಾಲೀಕಳನ್ನು ಅನುಕರಣೆ (ಮಿಮಿಕ್ರಿ) ಮಾಡುವ ಮೂಲಕ ಅಮೆಜಾನ್ ನಲ್ಲಿ ಶಾಪಿಂಗ್ ಆರ್ಡರ್ ಗಿಟ್ಟಿಸಿಕೊಂಡಿದೆ. ಬಡ್ಡಿ ಅನ್ನೋ ಈ ಗಿಳಿ ಅಮೆಜಾನ್ ನಲ್ಲಿ 13.50 ಡಾಲರ್ ನ ಗಿಫ್ಟ್ ಬಾಕ್ಸ್ ಗಳನ್ನು ಆರ್ಡರ್ ಮಾಡಿದೆ.

ಕೊರಿಯೆನ್ ಪ್ರಟೋರಿಯೆಸ್ ಎಂಬಾಕೆ ಈ ಗಿಳಿಯನ್ನು ಸಾಕಿದ್ದಾಳೆ. ಆಕೆಯ ಪತಿ ಹಾಗೂ ಮಗ ಹೊರಗಡೆ ಹೋಗಿದ್ರು, ಕೊರಿಯೆನ್ ಕೆಲಸದಲ್ಲಿ ಬ್ಯುಸಿಯಾಗಿದ್ಲು. ಈ ವೇಳೆ ಗಿಳಿ ಅಮೆಜಾನ್ ನಲ್ಲಿ ಶಾಪಿಂಗ್ ಮಾಡಿದೆ. ಅಮೆಜಾನ್ ಎಕೋ ಸ್ಪೀಕರ್ ನಲ್ಲಿ ಅಲೆಕ್ಸಾ ಎಂದು ಹೇಳಿದ್ರೆ ಸಾಕು ಅದು ಪ್ರತಿಕ್ರಿಯಿಸುತ್ತದೆ. ಸ್ಪೀಕರ್ ಬಳಿ ಕುಳಿತ ಗಿಳಿ ಅಲೆಕ್ಸಾ ಅಂತಾ ಹೇಳಿದೆ. ಅಲ್ಲಿಂದ ಪ್ರತಿಕ್ರಿಯೆ ಬರ್ತಿದ್ದಂತೆ ತನ್ನದೇ ಭಾಷೆಯಲ್ಲಿ ಏನೋ ಮಾತನಾಡಿದೆ. ಅಸಲಿಗೆ ಗಿಳಿ ತನ್ನ ಮಾಲೀಕಳನ್ನು ಅನುಕರಣೆ (ಮಿಮಿಕ್ರಿ )ಮಾಡಿದ ಕಾರಣ , ಹಾಗೆಯೇ ಅಮೆಜಾನ್ ನಲ್ಲಿ ಗಿಫ್ಟ್ ಬಾಕ್ಸ್ ಬುಕ್ ಆಗಿದೆ. ತಾವು ಸಾಕಿರೋ ಗಿಳಿ ಕೂಡ ಆನ್ ಲೈನ್ ಶಾಪಿಂಗ್ ಮಾಡಿರೋದನ್ನು ನೋಡಿ ಮನೆಯವರೆಲ್ಲ ಫುಲ್ ಖುಷಿಯಾಗಿದ್ದಾರೆ. ಆ ಮನೆಯಲ್ಲಿ ಸುಂದರವಾದ ಬೆಕ್ಕೊಂದನ್ನು ಕೂಡ ಸಾಕಿದ್ದಾರೆ. ಆ ಬೆಕ್ಕು ಕೂಡ ಮನೆಯವರನ್ನೆಲ್ಲ ಮಿಮಿಕ್ರಿ ಮಾಡುತ್ತದೆ.

Edited By

Hema Latha

Reported By

Madhu shree

Comments