Huawei P9 ಸ್ಮಾರ್ಟ್ಫೋನ್ ಮೇಲೆ ಭಾರೀ ರಿಯಾಯಿತಿ

20 Sep 2017 1:56 PM | General
227 Report

Huawei P9 ಸ್ಮಾರ್ಟ್ಫೋನ್ ಮೇಲೆ 25 ಸಾವಿರ ರೂಪಾಯಿ ರಿಯಾಯಿತಿ ಸಿಗುತ್ತಿದೆ. ಈ ಸ್ಮಾರ್ಟ್ಫೋನ್ ಬೆಲೆ 39,999 ರೂಪಾಯಿ. ಆದರೆ ಫ್ಲಿಪ್ಕಾರ್ಟ್ ನಲ್ಲಿ ಗ್ರಾಹಕರು ಈ ಮೊಬೈಲ್ 14,999 ರೂಪಾಯಿಗೆ ಖರೀದಿಸಬಹುದಾಗಿದೆ.

ಫ್ಲಿಪ್ಕಾರ್ಟ್ ನಾಲ್ಕು ದಿನಗಳ ಬಿಗ್ ಬಿಲಿಯನ್ ಸೇಲ್ ಶುರುಮಾಡಿದೆ. ಇದ್ರಲ್ಲಿ ಮೊಬೈಲ್ ಸೇರಿದಂತೆ ಅನೇಕ ವಸ್ತುಗಳ ಮೇಲೆ ಭರ್ಜರಿ ರಿಯಾಯಿತಿ ನೀಡಲಾಗಿದೆ. Huawei P9 ಸ್ಮಾರ್ಟ್ಫೋನ್ ನಲ್ಲಿ 3ಜಿಬಿ ರ್ಯಾಮ್ ಮತ್ತು 5.2 ಇಂಚಿನ IPS-NEO ಎಲ್ ಸಿ ಡಿ ಫುಲ್ ಹೆಚ್ ಡಿ ಡಿಸ್ಪ್ಲೇ ನೀಡಲಾಗಿದೆ. ಇದ್ರಲ್ಲಿ 12 ಮೆಗಾಫಿಕ್ಸಲ್ ಕ್ಯಾಮರಾ ಅಳವಡಿಸಲಾಗಿದೆ. ಈ ಮೊಬೈಲ್ ಸ್ಟೋರೇಜನ್ನು 256 ಜಿಬಿಯವರೆಗೆ ವಿಸ್ತರಿಸಬಹುದಾಗಿದೆ. Huawei ಕಂಪನಿ P9 ಸ್ಮಾರ್ಟ್ಫೋನನ್ನು 32ಜಿಬಿ ಇಂಟರ್ನಲ್ ಸ್ಟೋರೇಜ್ ಜೊತೆ 2016ರಲ್ಲಿ ಬಿಡುಗಡೆ ಮಾಡಿತ್ತು. ಇದ್ರಲ್ಲಿ 8 ಮೆಗಾಫಿಕ್ಸಲ್ ಸೆಲ್ಫಿ ಕ್ಯಾಮರಾವಿದ್ದು, 3000mAh ಬ್ಯಾಟರಿ ಹೊಂದಿದೆ.

Courtesy: Dailyhunt

Comments