ದಸರಾ ಉದ್ಘಾಟನೆ ನನ್ನ ಜೀವನದ ಅತ್ಯುತ್ತಮ ಕ್ಷಣ : ಕವಿ ನಿಸಾರ

20 Sep 2017 1:13 PM | General
386 Report

ಇದೇ ಮೊದಲ ಬಾರಿಗೆ ದಸರಾ ಉದ್ಘಾಟನೆಗೆ ಮುಸ್ಲಿಂ ವ್ಯಕ್ತಿಯನ್ನು ಸರ್ಕಾರ ಆಹ್ವಾನಿಸಿದೆ. ನವ್ಯ ಅಥವಾ ನಿತ್ಯೋತ್ಸವ ಕವಿ ನಿಸಾರ್ ಅಹಮ್ಮದ್ ಈ ಆಮಂತ್ರಣವನ್ನು ಗೌರವ ಎಂದು ಭಾವಿಸಿದ್ದಾರೆ. ಇದು ನನ್ನ ಜೀವನದ ಅತ್ಯುತ್ತಮ ಕ್ಷಣ ಎಂದು ಅವರು ಹೇಳಿದರು.

ನವ್ಯ ಅಥವಾ ನಿತ್ಯೋತ್ಸವ ಕವಿ ಎಂದು ಕರೆಯಲ್ಪಡುವ ನಿಸಾರ್ ಅಹಮ್ಮದ್ ಸೆ.21 ರಂದು ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ನಾಡ ಹಬ್ಬ ದಸರಾವನ್ನು ಉದ್ಘಾಟಿಸಲಿದ್ದಾರೆ. 1952 ರಲ್ಲಿ ಬಿಎಸ್ಸಿ ವಿದ್ಯಾರ್ಥಿಯಾಗಿದ್ದಾಗ ದಸರಾ ಮೆರವಣಿಗೆ, ವಿಜಯದಶಮಿಯಂದು ನಡೆಯುವ, ಜಂಬೂ ಸವಾರಿ ಮೆರವಣಿಗೆಯನ್ನು ತಮ್ಮ ಕುಟುಂಬದವರೊಡನೆ ನೋಡಿದ ದಿನಗಳನ್ನು ಮೆಲುಕು ಹಾಕಿದರು. ನಾನು 1941 ರಲ್ಲಿ ಹುಡುಗನಾಗಿದ್ದಾಗ ಬೆಂಗಳೂರು ಕರಗವನ್ನು ನೋಡಿದ್ದೇನೆ, ಆದರೆ ಕರಗವನ್ನು ದಸರಾ ಮೆರವಣಿಗೆಗೆ ಹೋಲಿಸಲು ಬರುವುದಿಲ್ಲ. ನನಗೆ ಈ ಮಹಾನ್ ಅವಕಾಶವನ್ನು ದಯಪಾಲಿಸಿದ ದೇವರಿಗೆ ನಾನು ಕೃತಜ್ಞನಾಗಿದ್ದೇನೆ ಎಂದು ಅವರು ಹೇಳಿದರು. ತಮಿಳುನಾಡಿನ ರಾಮನುಜಾಚಾರ್ಯ, ಕೇರಳದ ಶಂಕರಾಚಾರ್ಯ ಮತ್ತು ಇತರ ಪ್ರದೇಶಗಳಿಂದ ಬಂದ ಮುಸ್ಲಿಮರಿಗೆ ಕರ್ನಾಟಕವು ಸಾಂಸ್ಕೃತಿಕ ನೆಲೆಯನ್ನು ನೀಡಿದೆ ಎಂದು ಅವರು ಹೇಳಿದರು. ನಾನು ಮೈಸೂರಿಗೆ ಬರಲು ಸಂತೋಷ ಪಡುತ್ತೇನೆ ಎಂದ ಕವಿ ನಿಸಾರ್. ರಾಜ್ಯದಲ್ಲಿ ಒಳ್ಳೆಯ ಮಳೆ ಬೀಳುವ ಮೂಲಕ ರೈತರ ಸಂತಸಕ್ಕೆ ಕಾರಣವಾಗಿದೆ  ಎಂದು ಅವರು ಹೇಳಿದರು.

Courtesy: Dailyhunt

Comments