ಪ್ರಧಾನ ಮಂತ್ರಿ ಬೆಳೆ ವಿಮೆ ಯೋಜನೆಯಡಿ ರೈತರಿಗೆ ಸಿಕ್ಕಿದ್ದು ಕೇವಲ 4 ರೂ.

20 Sep 2017 12:12 PM | General
644 Report

ಪ್ರಧಾನ ಮಂತ್ರಿ ಫ್ಲಾಗ್ ಶಿಪ್ ಕಾರ್ಯಕ್ರಮದಡಿ ಬಾದಾಮಿ ಲಾಲ್ ಎಂಬ ರೈತರು ಕೇವಲ 4 ರೂಪಾಯಿ 70 ಪೈಸೆ ಪಡೆದುಕೊಂಡಿದ್ದಾರೆ. ಅಧಿಕ ಮೊತ್ತದ ಬೆಳೆ ವಿಮೆ ಸಿಗುತ್ತದೆಂಬ ಭರವಸೆಯಲ್ಲಿದ್ದ ರೈತರಿಗೆ ಸಿಕ್ಕಿದ್ದು ಕೇವಲ ಅಲ್ಪ ಮಾತ್ರ. ಅಜಬ್ ಸಿಂಗ್ ಎಂಬ ರೈತರಿಗೆ ಕೇವಲ 43 ರೂಪಾಯಿ, 7,000 ರೂಪಾಯಿ ಮೌಲ್ಯದ ವಿಮಾ ಯೋಜನೆಗೆ 1,342ರೂಪಾಯಿ ಕಟ್ಟಿದ್ದ ಧನ್ ಪಾಲ್ ಸಿಂಗ್ ಎಂಬುವವರಿಗೆ ಸಿಕ್ಕಿದ್ದು 49 ರೂಪಾಯಿ.

2016ನೇ ಸಾಲಿನ ಖಾರಿಫ್ ಋತುವಿನಲ್ಲಿ ಸೊಯಬಿನ್ ಬೆಳೆ ಕಳೆದುಕೊಂಡ ಮಧ್ಯ ಪ್ರದೇಶದ ಸೆಹೊರ್ ಜಿಲ್ಲೆಯ 52 ಮಂದಿ ರೈತರಿಗೆ ಪ್ರಧಾನ ಮಂತ್ರಿ ಬೆಳೆ ವಿಮೆ ಯೋಜನೆಯಡಿ ಸಿಕ್ಕಿದ್ದು ಕೇವಲ 3,061 ರೂಪಾಯಿ ಪರಿಹಾರ. ಇಲ್ಲಿ ಆಸಕ್ತಿಕರ ವಿಷಯವೆಂದರೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರವರು ತವರು ಜಿಲ್ಲೆ ಸೆಹೊರ್ ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಳೆದ ವರ್ಷ ಫೆಬ್ರವರಿಯಲ್ಲಿ ಮಹಾತ್ವಾಕಾಂಕ್ಷಿ ಬೆಳೆ ವಿಮೆ ಯೋಜನೆಯನ್ನು ಉದ್ಘಾಟಿಸಿದ್ದರು. ಅಲ್ಲದೆ ಇದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ವಿದಿಶ ಎಂಬ ಲೋಕಸಭಾ ಕ್ಷೇತ್ರವಿರುವ ಜಿಲ್ಲೆಯಾಗಿದೆ.
ಇದೇ ರೀತಿ, ತಮ್ಮ 22 ಎಕರೆ ಜಮೀನಿನಲ್ಲಿ ಸೊಯಾಬಿನ್ ಬೆಳೆ ಬೆಳೆದ ನೀಲ ಬಾಯಿ ಎಂಬ ರೈತರಿಗೆ ಸಿಕ್ಕಿದ ಪರಿಹಾರ ವಿಮೆ ಮೊತ್ತ 192 ರೂಪಾಯಿ 24 ಪೈಸೆ. ಅವರು 5,220 ರೂಪಾಯಿ ಪ್ರೀಮಿಯಂ ಕಟ್ಟಿದ್ದರು.
ಪ್ರಧಾನ ಮಂತ್ರಿ ಫ್ಲಾಗ್ ಶಿಪ್ ಕಾರ್ಯಕ್ರಮದಡಿ ಬಾದಾಮಿ ಲಾಲ್ ಎಂಬ ರೈತರು ಕೇವಲ 4 ರೂಪಾಯಿ 70 ಪೈಸೆ ಪಡೆದುಕೊಂಡಿದ್ದಾರೆ. ಪ್ರಾಥಮಿಕ ಸಹಕಾರಿ ಸಮಿತಿಯ ವ್ಯವಸ್ಥಾಪಕ ಕೃಪರಾಮ್ ಮಾಲ್ವಿಯಾ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿ, ಸೆಹೊರ್ ಜಿಲ್ಲೆಯ ತಿಲಾದಿಯಾ ಗ್ರಾಮದ 52 ಮಂದಿ ರೈತರಿಗೆ 3,061 ರೂಪಾಯಿ 50 ಪೈಸೆ ನೀಡಲಾಗಿದೆ ಎಂದು ಹೇಳಿದ್ದಾರೆ.ಇಷ್ಟು ಸಣ್ಣ ಮೊತ್ತದ ಪರಿಹಾರ ಸಿಕ್ಕಿದ್ದಕ್ಕಾಗಿ ರೈತರು ಚೆಕ್ ಮೂಲಕ ತೆಗೆದುಕೊಳ್ಳದೆ ತಮ್ಮ ಕಿಸಾನ್ ಕ್ರೆಡಿಟ್ ಕಾರ್ಡ್ ಪಾವತಿಯಿಂದ ಪಡೆದ ಪರಿಹಾರವನ್ನು ಡೆಬಿಟ್ ಮಾಡುವಂತೆ ಹೇಳಿದ್ದಾರೆ ಎಂದಿದ್ದಾರೆ.

Courtesy: Dailyhunt

Comments