ದಸರಾಗೆ ಗೋಲ್ಡ್ ಕಾರ್ಡ್‍ಗಳು ರೆಡಿ

16 Sep 2017 12:00 PM | General
349 Report

ದಸರಾಕ್ಕಾಗಿ ಗೋಲ್ಡ್ ಕಾರ್ಡ್‍ಗಳು ಸಿದ್ಧವಾಗಿದೆ. ಒಬ್ಬರಿಗೆ 2,999ರೂ ಬೆಲೆಯ ಈ ಕಾರ್ಡ್‍ಗಳನ್ನು ಆನ್‍ಲೈನ್‍ನಲ್ಲೂ ಪಡೆದುಕೊಳ್ಳಬಹುದಾಗಿದೆ . ಮೈಸೂರು ದಸರಾ ವೆಬ್‍ಸೈಟ್ ಅಥವಾ bookmyshow ಮೂಲಕ ಗೋಲ್ಡ್ ಕಾರ್ಡ್‍ಖರೀದಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ರಂದೀಪ್ ತಿಳಿಸಿದ್ದಾರೆ.

ಈ ಬಾರಿಯ ದಸರಾಕ್ಕಾಗಿ ಗೋಲ್ಡ್ ಕಾರ್ಡ್‍ಗಳನ್ನು ಜಿಲ್ಲಾಡಳಿತ ಸಿದ್ಧಪಡಿಸಿದೆ ಎಂದು ಜಿಲ್ಲಾಧಿಕಾರಿ ರಂದೀಪ್ ತಿಳಿಸಿದ್ದಾರೆ. ಈ ಕಾರ್ಡ್ ಪಡೆದವರು ಮೈಸೂರು ಅರಮನೆ, ಮೃಗಾಲಯ, ಹಾರಂಗಿ ಕೆರೆ, ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಯ ವಿಶೇಷ ದರ್ಶನ, ಜಗನ್‍ಮೋಹನ ಅರಮನೆ, ಶ್ರೀರಂಗಪಟ್ಟಣದ ರಂಗನತಿಟ್ಟು, ಪಕ್ಷಿಧಾಮ ಸೇರಿದಂತೆ ಶ್ರೀರಂಗಪಟ್ಟಣದ ಪ್ರವಾಸಿ ತಾಣಗಳನ್ನು ಸಹ ವೀಕ್ಷಿಸಬಹುದಾಗಿದೆ ಎಂದು ತಿಳಿಸಿದರು.

Courtesy: Dailyhunt

Comments