ಆಪಲ್ ನ 10ನೇ ವಾರ್ಷಿಕೋತ್ಸವಕ್ಕೆ ಗ್ರಾಹಕರಿಗೆ ಬಂಪರ್ ಗಿಫ್ಟ್

15 Sep 2017 3:42 PM | General
231 Report

ಇ-ಕಾಮರ್ಸ್ ವೆಬ್ಸೈಟ್ ನಲ್ಲಿ ಐಫೋನ್ 7, ಐಫೋನ್ 7 ಪ್ಲಸ್, ಐಫೋನ್ 6 ಹಾಗೂ ಐಫೋನ್ 6ಎಸ್ ಫೋನ್ ಮೇಲೆ ಭಾರಿ ರಿಯಾಯಿತಿ ಸಿಗ್ತಿದೆ. ಇ-ಕಾಮರ್ಸ್ ಕಂಪನಿ ಫ್ಲಿಪ್ಕಾರ್ಟ್ ನಲ್ಲಿ ಐಫೋನ್ 6 ಕೇವಲ 5,999 ರೂಪಾಯಿಗೆ ಲಭ್ಯವಿದೆ. ಆದ್ರೆ 5,999 ಡೀಲ್ ಕೇವಲ ವಿನಿಮಯ ಗ್ರಾಹಕರಿಗೆ ಮಾತ್ರ ಸಿಗಲಿದೆ. ವಿನಿಮಯ ಆಫರ್ ಬಳಸದ ಗ್ರಾಹಕರಿಗೆ ಐಫೋನ್6 - 25,999 ರೂಪಾಯಿಗೆ ಸಿಗ್ತಿದೆ. ಫ್ಲಿಪ್ಕಾರ್ಟ್ 3,501 ರೂಪಾಯಿ ವಿಶೇಷ ಡಿಸ್ಕೌಂಟ್ ಕೂಡ ಕೊಡ್ತಿದೆ.

ಆಪಲ್ ನ 10ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಆಪಲ್ ಪ್ರಿಯರಿಗೆ ಕಂಪನಿ ಈ ಗಿಫ್ಟ್ ನೀಡಿದೆ. ಆಪಲ್ ಸದ್ಯ ಐಫೋನ್8, ಐಫೊನ್ 8 ಪ್ಲಸ್, ಐಫೋನ್ ಎಕ್ಸ್ ಬಿಡುಗಡೆ ಮಾಡಿದೆ. ಈ ಮಧ್ಯೆ ಆಪಲ್ ನ ಹಳೆ ಮಾಡೆಲ್ ಗಳ ಬೆಲೆ ಗಣನೀಯವಾಗಿ ಇಳಿಕೆ ಕಂಡಿದೆ. ಕಂಪನಿ ಆಪಲ್ ಜೊತೆ ಬೇರೆ ಕಂಪನಿ ಮೊಬೈಲ್ ವಿನಿಮಯಕ್ಕೂ ಅವಕಾಶ ನೀಡಿದೆ. ಈಗಾಗಲೇ ಬಿಡುಗಡೆಯಾಗಿರುವ ಬಹುನಿರೀಕ್ಷಿತ ಆಪಲ್ ಐಫೋನ್ ಎಕ್ಸ್ ಖರೀದಿಗೆ ಭಾರತೀಯ ಗ್ರಾಹಕರು 89 ಸಾವಿರ ರೂಪಾಯಿ ನೀಡಬೇಕಿದೆ. 256ಜಿಬಿ ಫೋನ್ ಗೆ 1,02,000 ರೂಪಾಯಿಯೆಂದು ಕಂಪನಿ ಘೋಷಣೆ ಮಾಡಿದೆ. ಗ್ರಾಹಕರು ಸೆಪ್ಟೆಂಬರ್ 29 ರಿಂದ 64 ಸಾವಿರ ರೂಪಾಯಿ ಹಾಗೂ 84 ಸಾವಿರ ರೂಪಾಯಿ ಬೆಲೆ ಬಾಳುವ ಐಫೋನ್ 8 ಹಾಗೂ ಐಫೋನ್ 8 ಪ್ಲಸ್ ಖರೀದಿ ಮಾಡಬಹುದಾಗಿದೆ.

Courtesy: Dailyhunt

Comments