ಕುಲಭೂಷಣ್ ಜಾಧವ್ ಪ್ರಕರಣ : ಐಸಿಜೆಗೆ ಲಿಖಿತ ವಾದ ಸಲ್ಲಿಸಿದ ಭಾರತ

13 Sep 2017 10:32 PM | General
334 Report

ಹೇಗ್: ಪಾಕಿಸ್ತಾನದ ವಶದಲ್ಲಿರುವ ಭಾರತೀಯ ನೌಕಾದಳದ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಪ್ರಕರಣದ ವಿಚಾರಣೆ ಇಂದು ನಡೆದಿದೆ. ಅಂತರಾಷ್ಟ್ರೀಯ ಕೋರ್ಟ್ ನಲ್ಲಿ ಪುನರಂಭವಾಗಿದೆ.

ನೌಕಾದಳದ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಪ್ರಕರಣದ ವಿಚಾರಣೆ ಇಂದು ನಡೆದಿದೆ. ಅಂತರಾಷ್ಟ್ರೀಯ ಕೋರ್ಟ್ ನಲ್ಲಿ ಪುನರಂಭವಾಗಿದೆ. ಭಾರತ ತನ್ನ ವಾದವನ್ನು ಲಿಖಿತ ರೂಪದಲ್ಲಿ ಸಲ್ಲಿಸಿದೆ.  ಈ ಸಂಬಂಧ ಲಿಖಿತ ವಾದವನ್ನು ಭಾರತ ಸರ್ಕಾರ್ ಹೇಗ್ ನಲ್ಲಿ ಅಂತರಾಷ್ಟ್ರೀಯ ಕೋರ್ಟ್ ಗೆ ಸಲ್ಲಿಸಿದ್ದು, ಇದರನ್ವಯ ಮತ್ತೆ ವಿಚಾರಣೆ ನಡೆಯಲಿದೆ. ಅಲ್ಲದೇ, ಡಿಸೆಂಬರ್ 13ರೊಳಗೆ ಪಾಕಿಸ್ತಾನ ಭಾರತ ಸಲ್ಲಿಸಿರುವ ಲಿಖಿತ ದಾಖಲೆಗಳಿಗೆ ಪ್ರತಿಕ್ರಿಯೆ ನೀಡಬೇಕಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಕುಲಭೂಷಣ್ ಜಾಧವ್ ಗೆ ಪಾಕಿಸ್ತಾನ ವಿಧಿಸಿದ್ದ ಗಲ್ಲು ಶಿಕ್ಷೆಗೆ ಐಸಿಜೆ ಮೇ ತಿಂಗಳಲ್ಲಿ ತಡೆಯಾಜ್ಞೆ ನೀಡಿತ್ತು. ಡಿಸೆಂಬರ್ ವೇಳೆಗೆ
ಕುಲಭೂಷಣ್ ಪ್ರಕರಣದಲ್ಲಿ ಅಂತಿಮ ತೀರ್ಪು ಬರಬಹುದು ಎಂದು ನಿರೀಕ್ಷಿಸಲಾಗಿದೆ.ಮತ್ತೊಂದೆಡೆ ಚೀನಾ- ಪಾಕಿಸ್ತಾನ ಆರ್ಥಿಕ ಕಾರಿಡಾರ್ ನಲ್ಲಿ ದಿಕ್ಕು ತಲುಪಿಸಲು ಭಾರತ ಕುಲಭೂಷಣ್ ಜಾಧವ್ ಪ್ರಕರಣವನ್ನು ಬಳಸಿಕೊಳ್ಳುತ್ತಿದೆ ಎಂದು ಪಾಕಿಸ್ತಾನ ಆಂತರಿಕ ಸಚಿವ ಅಹ್ಸಾನ್ ಇಕ್ಬಾಲ್ ಆರೋಪಿಸಿದ್ದಾರೆ.

 

 

Edited By

venki swamy

Reported By

Sudha Ujja

Comments