ಪ್ರಧಾನಿ ನರೇಂದ್ರ ಮೋದಿ ಅವರಿಂದ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವಂತಹ ಮತ್ತೊಂದು ಕೊಡುಗೆ !

13 Sep 2017 5:10 PM | General
479 Report

ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಹಾಗೂ ಜಪಾನ್ ಪ್ರಧಾನಿ ಶಿಂಜೊ ಅಬೆ ಅವರು ಇದೇ ಸೆಪ್ಟೆಂಬರ್ 14ರಂದು ರೈಲ್ವೆ ಯೋಜನೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ…

ಬಹುನಿರೀಕ್ಷಿತ ಮುಂಬೈ-ಅಹ್ಮದಾಬಾದ್ ನಡುವಣ ಹೈಸ್ಪೀಡ್ (ಬುಲೆಟ್) ರೈಲು ಯೋಜನೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ ಅಪಘಾತ ತಡೆಯುವ ಉದ್ದೇಶದಿಂದ ಅತ್ಯುನ್ನತ ಹಾಗೂ ಹೆಚ್ಚು ಭದ್ರತೆ ಇರುವ  ಬುಲೆಟ್ ರೈಲು ಯೋಜನೆ ಆರಂಭವಾಗುತ್ತಿದೆ. ಈ ಯೋಜನೆಯಿಂದ ಪ್ರಯಾಣಿಕರ ಸುರಕ್ಷತೆ, ಸಂಚಾರದ ವೇಗ, ಗ್ರಾಹಕರಿಗೆ ಅತ್ಯುತ್ತಮ ಸೇವೆ ಹಾಗೂ ತಂತ್ರಜ್ಞಾನ, ಕೌಶಲ್ಯ ಹಾಗೂ ಮಾನದಂಡಗಳ ವಿಚಾರದಲ್ಲಿ ಭಾರತೀಯ ರೈಲ್ವೆ ವಿಶ್ವದ ಪ್ರಮುಖ ರೈಲ್ವೆಗಳ ಪೈಕಿ ಒಂದಾಗಲಿದೆ.

ಹೀಗಾಗಿ ಈ ಯೋಜನೆ ಭಾರತದ ಸಾರಿಗೆ ಇತಿಹಾಸವನ್ನೇ ಬದಲಿಸುವ ನಿರೀಕ್ಷೆಯೂ ಇದೆ.ಇಂತಹ ಮಹತ್ವ ಯೋಜನೆ ವಿರುದ್ಧ ಅನೇಕ ಮಾತುಗಳು ಕೇಳಿಬರುತ್ತಿವೆ. ಈ ಯೋಜನೆ ಕೇವಲ ಶ್ರೀಮಂತರಿಗೆ ಮಾತ್ರ ಸೀಮಿತವೇ ಹೊರತು ಜನಸಾಮಾನ್ಯನಿಗೆ ಅಲ್ಲ ಎಂಬ ವಾದಗಳನ್ನು ಹರಿಬಿಡಲಾಗಿದೆ. ಬಡವರಿಗೆ ಕಡಿಮೆ ದರದಲ್ಲಿ,ಅನುಕೂಲವಾಗುವಂತೆ, ವಿಶೇಷ ಸೌಲಭ್ಯಗಳನ್ನೊಳಗೊಂಡಂತೆ  ಬುಲೆಟ್ ಪ್ರಯಾಣ ಅತೀಶೀಘ್ರದಲ್ಲೇ ಸಿಗುತ್ತಿದೆ. ಎಂದು ಪ್ರಧಾನಿ ಮೋದಿಯವರು ತಿಳಿಸಿದ್ದಾರೆ.ಸಾಕಷ್ಟು ವಿಶೇಷತೆಗಳನ್ನು ಹೊಂದಿರುವ ಈ ರೈಲ್ವೆ ಯೋಜನೆ ಪ್ರಗತಿಯತ್ತ ಸಾಗುತ್ತಿರುವ ಭಾರತಕ್ಕೆ ಅವಶ್ಯಕ.

Edited By

Suresh M

Reported By

Suresh M

Comments