ಶೀಘ್ರದಲ್ಲೇ ರೂ. 100 ಹೊಸ ನಾಣ್ಯ ಬಿಡುಗಡೆ!!

13 Sep 2017 11:01 AM | General
600 Report

ರೂ. 2000, 500, 200 ಮುಖಬೆಲೆಯ ಹೊಸ ನೋಟುಗಳ ನಂತರ ಇದೀಗ ರೂ. 100 ನಾಣ್ಯ ಬಿಡುಗಡೆ ಆಗಲಿದೆ!!

ಕೇಂದ್ರ ಸರ್ಕಾರ ರೂ. 200 ಮುಖಬೆಲೆಯ ಹೊಸ ನೋಟು ಚಲಾವಣೆಗೆ ತಂದ ನಂತರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಶೀಘ್ರದಲ್ಲಿಯೇ 100 ರೂಪಾಯಿ ನಾಣ್ಯ ಬಿಡುಗಡೆ ಮಾಡಲಿದೆ.ಎಐಎಡಿಎಂಕೆ ಸಂಸ್ಥಾಪಕ ಆಗಿರುವ ಎಂ.ಜಿ. ರಾಮಚಂದ್ರನ್‌ ಅವರ ಜನ್ಮ ಶತಮಾನೋತ್ಸವದ ಪ್ರಯುಕ್ತ ರೂ.100 ನಾಣ್ಯಗಳನ್ನು ಬಿಡುಗಡೆ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.

100 ಮೌಲ್ಯದ ನಾಣ್ಯಗಳು 44 ಮಿಲಿ ಮೀಟರ್‌ ಸುತ್ತಳತೆ ಮತ್ತು 35 ಗ್ರಾಂ ತೂಕ ಹೊಂದಿರಲಿದೆ. ನಾಣ್ಯದ ಒಂದು ಬದಿಯಲ್ಲಿ ರಾಷ್ಟ್ರಲಾಂಛನ ಅಶೋಕಸ್ತಂಭದ ಚಿತ್ರವಿದ್ದು, ಕೆಳಗೆ ಸತ್ಯಮೇವ ಜಯತೆ ಇರಲಿದೆ. ಮತ್ತೊಂದು ಬದಿ ಎಂ.ಜಿ. ರಾಮಚಂದ್ರನ್ ಅವರ ಬಾವಚಿತ್ರ ಇರಲಿದೆ.

ಖ್ಯಾತ ನಟ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿಯಾಗಿದ್ದ ಎಂ.ಜಿ. ರಾಮಚಂದ್ರನ್ ಅವರ ಜನ್ಮ ಶತಮಾನೋತ್ಸವದ ಸುಸಂದರ್ಭದಲ್ಲಿ ವಿಶೇಷ ನಾಣ್ಯ ಬಿಡುಗಡೆ ಮಾಡುವಂತೆ ತಮಿಳುನಾಡು ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿತ್ತು.

ಇದೇ ಸಂದರ್ಭದಲ್ಲಿ ಪ್ರಸಿದ್ಧ ಗಾಯಕಿ ಎಂ.ಎಸ್. ಸುಬ್ಬಲಕ್ಷ್ಮಿ ಇವರ ಜನ್ಮ ಶತಮಾನೋತ್ಸವ ಕೂಡ ಇದೆ. ಸರ್ಕಾರ ಎಂ.ಜಿ.ಆರ್ ಮತ್ತು ಎಂ.ಎಸ್ ಸುಬ್ಬಲಕ್ಷ್ಮೀ ನೆನಪಾರ್ಥ ಈ ನಾಣ್ಯಗಳನ್ನು ಬಿಡುಗಡೆ ಮಾಡಲಿದೆ. ಒಂದು ನಾಣ್ಯದ ಹಿಂಭಾಗದಲ್ಲಿ ಸುಬ್ಬಲಕ್ಷ್ಮಿ ಹಾಗೂ ಇನ್ನೊಂದು ನಾಣ್ಯದ ಹಿಂಭಾಗದಲ್ಲಿ ಎಂ.ಜಿ. ರಾಮಚಂದ್ರನ್ ಅವರ ಭಾವಚಿತ್ರ ಮುದ್ರಣವಾಗಲಿದೆ.

ಇದೇ ಸಂದರ್ಭದಲ್ಲಿ 5 ಮತ್ತು 10 ರೂಪಾಯಿಯ ಹೊಸ ನಾಣ್ಯಗಳನ್ನು ಸರ್ಕಾರ ಬಿಡುಗಡೆ ಮಾಲು ನಿರ್ಧರಿಸಿದೆ. ಇನ್ನು 5 ರೂಪಾಯಿ ಹೊಸ ನಾಣ್ಯ 23 ಮಿಲಿಮೀಟರ್ ವ್ಯಾಸವಿರಲಿದೆ.ರೂ. 5 ನಾಣ್ಯಗಳು ಡಾ.ಎಂ.ಜಿ. ರಾಮಚಂದ್ರನ್ ಜನ್ಮ ಶತಮಾನೋತ್ಸವದ ನೆನಪು ಮತ್ತು ರೂ. 10 ನಾಣ್ಯಗಳು ಡಾ ಎಂ.ಎಸ್. ಸುಬ್ಬುಲಕ್ಷ್ಮಿ ಜನ್ಮ ಶತಮಾನೋತ್ಸವದ ನೆನಪಿನ ಪ್ರತೀಕಗಳಾಗಿ ಹೊಮ್ಮಲಿವೆ.

Courtesy: oneindia kannada

Comments