ಬಿಎಸ್ವೈ ವಿರುದ್ಧ ಸಾಕ್ಷ್ಯ ಇದೆ : ಎಸಿಬಿ ವಾದ

08 Sep 2017 12:03 PM | General
294 Report

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಡಿನೋಟಿಫಿಕೇಷನ್ಗೆ ಶಿಫಾರಸು ಮಾಡಿದ್ದಾರೆ ಎನ್ನುವುದಕ್ಕೆ ಸಾಕ್ಷ್ಯ ಇದೆ ಎಂದು ಎಸಿಬಿ ಹೈಕೋರ್ಟ್ನಲ್ಲಿ ಗುರುವಾರ ವಾದಿಸಿದೆ.

ತಮ್ಮ ವಿರುದ್ಧದ ಡಿನೋಟಿಫಿಕೇಷನ್‌ ಪ್ರಕರಣ ರದ್ದುಗೊಳಿಸುವಂತೆ ಕೋರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸುತ್ತಿರುವ ನ್ಯಾ.ಅರವಿಂದ ಕುಮಾರ್‌ ಅವರಿದ್ದ ಏಕಸದಸ್ಯಪೀಠದ ಮುಂದೆ ಎಸಿಬಿ ಪರ ಹಿರಿಯ ನ್ಯಾಯವಾದಿ ಪ್ರೋ.ರವಿವರ್ಮ ಕುಮಾರ್‌ ಈ ವಾದ ಮಂಡಿಸಿದರು.

''ಯಶವಂತಪುರ ಹೋಬಳಿಯ ಹನುಮಂತಪ್ಪ ಅವರಿಗೆ ಸೇರಿದ 1.8 ಎಕರೆ ಡಿನೋಟಿಫೈ ಮಾಡಲು ಯಾವುದೇ ಕಾನೂನಿನ ಅಡೆತಡೆ ಇಲ್ಲ ಎಂದು ಸ್ವತಃ ಬಿ.ಎಸ್‌.ಯಡಿಯೂರಪ್ಪ ಅವರೇ ಟಿಪ್ಪಣಿ ಬರೆದು ಕಳುಹಿಸಿದ್ದಾರೆ. ಇದು ಅವರು ಭೂ ಮಾಲೀಕರ ಜೊತೆ ಪಿತೂರಿ ನಡೆಸಿದ್ದಾರೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ. ಅಲ್ಲದೆ, ಡಿನೋಟಿಫಿಕೇಷನ್‌ಗೆ ಶಿಫಾರಸು ಮಾಡಿದ್ದ ಕಡತಗಳಲ್ಲಿ ಕೆಲವು ಕಾಗದಪತ್ರಗಳು ನಾಪತ್ತೆಯಾಗಿವೆ''ಎಂದು ಅವರು ಹೇಳಿದರು. ಆ ರೀತಿಯ 20 ಪ್ರಕರಣಗಳಿವೆ. ಕಾನೂನು ಪ್ರಕಾರ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲು ಅವಕಾಶವಿದೆ ಎಂದೂ ಸಹ ನ್ಯಾಯಪೀಠಕ್ಕೆ ತಿಳಿಸಿದರು. ಶುಕ್ರವಾರವೂ ವಿಚಾರಣೆ ಮುಂದುವರಿಯಲಿದೆ.

Courtesy: vijaya karnataka

Comments