ತಮಿಳುನಾಡಿಗೆ ನೀರು ಹರಿಸುತ್ತಿರುವುದಕ್ಕೆ ಸರ್ಕಾರದ ವಿರುದ್ದ ಬೇಸರ ವೈಕ್ತಪಡಿಸಿದ ದೇವೇಗೌಡರು

08 Sep 2017 11:27 AM | General
566 Report

ತಮಿಳುನಾಡಿಗೆ ಹೇಮಾವತಿ ಜಲಾಶಯವೇ ಟಾರ್ಗೆಟ್ ಆಗಿದೆ. ಕಳೆದ ವರ್ಷ 23 ಟಿಎಂಸಿ ಅಡಿ ನೀರು ಬಿಡಲಾಗಿದೆ. ಹೀಗಾದರೆ ಜಿಲ್ಲೆಯ ಜನರಿಗೆ ನೀರು ಪೂರೈಸಲು ಆಗುವುದಿಲ್ಲ.

ಹೇಮಾವತಿ ಜಲಾಶಯದಿಂದ ಪ್ರತಿನಿತ್ಯ 6,130 ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ. ಸೆ. 30ರ ವರೆಗೆ ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಲಿದೆ ಎಂದು ಎಚ್‌.ಡಿ. ದೇವೇಗೌಡರು ಆತಂಕ ವ್ಯಕ್ತಪಡಿಸಿದರು.ಗುರುವಾರ ಜಲಾಶಯ ವೀಕ್ಷಿಸಿದ ಅವರು, ‘ನೀರು ಬಿಡದಿದ್ದರೆ ತಮಿಳುನಾಡು ರೈತರು ದೆಹಲಿಯ ಜಂತರ್ ಮಂತರ್ ಎದುರು ಅರೆಬೆತ್ತಲೆ ಪ್ರತಿಭಟನೆ ಮಾಡುತ್ತಾರೆ. ಆದರೆ, ರಾಜ್ಯದ ರೈತರಲ್ಲಿ ತಾಳ್ಮೆ ಇದ್ದು, ಅವರು ಸ್ವಾಭಿಮಾನಕ್ಕಾಗಿ ನೀರಿಗೆ ಹಾರಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಮಿಳುನಾಡಿಗೆ ಹೇಮಾವತಿ ಜಲಾಶಯವೇ ಟಾರ್ಗೆಟ್ ಆಗಿದೆ. ಕಳೆದ ವರ್ಷ 23 ಟಿಎಂಸಿ ಅಡಿ ನೀರು ಬಿಡಲಾಗಿದೆ. ಹೀಗಾದರೆ ಜಿಲ್ಲೆಯ ಜನರಿಗೆ ನೀರು ಪೂರೈಸಲು ಆಗುವುದಿಲ್ಲ. ಸರ್ಕಾರ ಈ ಸಂಬಂಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಹೇಮಾವತಿ ಜಲಾಶಯದಿಂದ ಮಾತ್ರ ಹೆಚ್ಚಿನ ಪ್ರಮಾಣದ ನೀರನ್ನು ಹರಿಸಲಾಗುತ್ತಿದೆ. ಇಂಥ ದಂದ್ವ ನೀತಿ ಅನುಸರಿಸುತ್ತಿರುವುದು ಏಕೆ ಎಂದು ಅವರು ಸರ್ಕಾರವನ್ನು ಪ್ರಶ್ನಿಸಿದರು.

 

Edited By

Suresh M

Reported By

Suresh M

Comments