ಮೆಟ್ರೋ ೨ನೇ ಹಂತ ಯೋಜನೆಗೆ ರೂ ೨.೧೮೭ ಕೋಟಿ ರೂ ಸಂಪುಟ ಒಪ್ಪಿಗೆ

04 Sep 2017 4:51 PM | General
414 Report

ಬೆಂಗಳೂರು ಮೆಟ್ರೋ ರೈಲು ನಿಗಮದ(ಬಿಎಂಆರ್‌ಸಿಎಲ್) ಎರಡನೇ ಹಂತದ ಯೋಜನೆಗೆ ಅಗತ್ಯವಿರುವ ಭೂಸ್ವಾಧೀನಕ್ಕೆ ೨,೧೮೭ ಕೋಟಿ ರೂ ಗಳನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

 

ನಮ್ಮ ಮೆಟ್ರೋ ಯೋಜನೆಗೆ ಒಟ್ಟು ೬.೨೯೩ ಕೋಟಿ ರೂ ವೆಚ್ಚ ತಗಲಿದ್ದು, ಹೆಚ್ಚುವರಿಯಾಗಿ ೨.೧೮೭ ಕೋಟಿ ರೂ ನೀಡಲು ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ. ಈ ಮೊದಲು ಯೋಜನೆಗೆ ೪,೧೦೫ ಕೋಟಿ ರೂ ಅನುದಾನ ನೀಡಲು ನಿರ್ಧರಿಸಲಾಗಿತ್ತು. ಮಾರ್ಗಸೂಚಿ ದರ ಹೆಚ್ಚಳ, ಮತ್ತಿತರರ ಕಾರಣದಿಂದ ಭೂಸ್ವಾಧೀನ ಪ್ರಕ್ರಿಯೆಗೆ ಒಟ್ಟು ೬.೨೯೩ ಕೋಟಿ ರೂ ವೆಚ್ಚ ತಗಲಿದ್ದು, ಹೆಚ್ಚುವರಿ ಹಣ ಬಿಡುಗಡೆಗೆ ಸಂಪುಟ ಒಪ್ಪಿದ್ದು, ಈ ಮೊತ್ತವನ್ನು ಸಾಲದ ರೂಪದಲ್ಲಿ ನಿಗಮಕ್ಕೆ ಒದಗಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವರುಣ ಆರ್ಭಟಕ್ಕೆ ತತ್ತರಿಸಿರುವ ಕೋರಮಂಗಲ ನಾಲೆಯಿಂದ ಬೆಳ್ಳಂದೂರು ಕೆರೆಗೆ ಹರಿಯುವ ತ್ಯಾಜ್ಯ ನೀರನ್ನು ತಡೆಯಲು ಸಂಸ್ಕರಣಾ ಘಟನ ನಿರ್ಮಾಣ ಮಾಡಲು ೧೨ ಕೋಟಿ ರೂ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ ಎಂದು ಸಚಿವ ಸಂಪುಟ ಸಭೆಯ ನಂತರ ಕಾನೂನು ಸಂಸದೀಯ ಸಚಿವ ಟಿ.ಬಿ.ಜಯಚಂದ್ರ ಅವರು ಈ ವಿಷಯ ತಿಳಿಸಿದರು.

 

 

Courtesy: sanjevani

Comments