ಪ್ರತೇಕ ಲಿಂಗಾಯತ ಧರ್ಮಕ್ಕೆ ನೆಡದಾಡುವ ದೇವರು ಶಿವಕುಮಾರ ಸ್ವಾಮೀಜಿ ಪ್ರತಿಕ್ರಯೇ ಏನು ?

ಪ್ರತೇಕ ಲಿಂಗಾಯತ ಧರ್ಮಕ್ಕಾಗಿ ರಾಜ್ಯದಲ್ಲಿ ಭುಗಿಲೆದ್ದಿದೆ. ವೀರಶೈವ ಹಾಗೂ ಲಿಂಗಾಯತವನ್ನು ಬೆಂಬಲಿಸುವ ಸ್ವಾಮಿಜಿಗಳು ಒಬ್ಬರಿಗೊಬ್ಬರು ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ.
ಲಿಂಗಾಯತರ ಬೀದಿ ಜಗಳ ನಿಲ್ಲಲಿ! (ಹೀಗೊಂದು ನಿಷ್ಪಕ್ಷಪಾತ ನಿಲುವು) ರಾಜ್ಯದ ಹಲವು ಮಠಗಳಲ್ಲಿ ಪ್ರಮುಖ ಮಠವಾಗಿರುವ ಸಿದ್ದಗಂಗಾ ಮಠದ ಶ್ರೀಗಳು ಲಿಂಗಾಯತ ಪರವಾಗಿದ್ದಾರೆ ಎಂದು ಕೆಲವರು ಹೇಳಿಕೆ ನೀಡುತ್ತಿದ್ದರೆ, ಇನ್ನು ಕೆಲವರು ಇಲ್ಲ ಅವರು ವೀರಶೈವದ ಪರ ಇದ್ದಾರೆ ಎಂಬ ಮಾತುಗಳಿಗೆ ಸ್ವತಃ ಶಿವಕುಮಾರ ಸ್ವಾಮಿಜಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಪ್ರತೇಕ ಧರ್ಮದ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದಗಂಗಾ ಶ್ರೀಗಳು, "ಪ್ರತೇಕ ಲಿಂಗಾಯತ ಧರ್ಮ ವಿಚಾರದಲ್ಲಿ ಎಲ್ಲರೂ ಹೊಂದಾಣಿಕೆ ಮಾಡಿಕೊಳ್ಳಿ" ಎಂದು ಸಲಹೆ ನೀಡಿದರು. ಸಮಾಜದ ಒಳಿತಿಗಾಗಿ ನಡೆಯುವ ಹೋರಾಟಕ್ಕೆ ನಮ್ಮ ಬೆಂಬಲವೆಂದು ಇದೇ ವೇಳೆ ಶ್ರೀಗಳು ಸ್ಪಷ್ಟಪಡಿಸಿದರು. ಇನ್ನು ಕೆಲ ಸ್ವಾಮಿಜಿಗಳು ಇದ್ಯಾವುದು ನಮಗೆ ಬೇಡವೆಂದು ಯಾವುದೇ ಸಭೆ, ಸಮಾವೇಶಗಳಲ್ಲಿ ಕಾಣಿಸಿಕೊಳ್ಳದೆ ತಾವೇನೂ ತಮ್ಮ ಕೆಲಸವೇನು ಎಂಬಂತೆ ಸುಮ್ಮನೆ ಕೂತಿದ್ದಾರೆ.
Comments