ಬಿಬಿಎಂಪಿ ತ್ರಿಭಜನೆಗೆ ಸರ್ಕಾರದ ಭರ್ಜರಿ ತಯಾರಿ

04 Sep 2017 11:05 AM | General
365 Report

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಅವಧಿ ಸೆಪ್ಟೆಂಬರ್ 28 ಕ್ಕೆ ಅಂತ್ಯವಾಗಲಿದೆ. ಜಿ ಪದ್ಮಾವತಿ ಬಿಬಿಎಂಪಿಯ ಕೊನೆಯ ಮೇಯರ್ ಅಂತಾ ಹೇಳಲಾಗ್ತಿದೆ. ಯಾಕಂದ್ರೆ ಇನ್ಮುಂದೆ ಬಿಬಿಎಂಪಿ ಇರೋದಿಲ್ಲ. ಬದಲಿಗೆ ಬೆಂಗಳೂರಿಗೆ ಮೂರು ಕಾರ್ಪೊರೇಷನ್‍ಗಳು ಬರಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

 

ಹೌದು. ಬಿಬಿಎಂಪಿ ಅಂಗಳದ ಸದ್ಯದ ಬಿಸಿಬಿಸಿ ಚರ್ಚೆ ಅಂದ್ರೆ ಬಿಬಿಎಂಪಿ ಮೂರು ಭಾಗವಾಗುತ್ತೆ ಅನ್ನೋದು. ಎರಡು ವರ್ಷಗಳಿಂದ ಬಿಬಿಎಂಪಿಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡ್ಕೊಂಡು ಅಡಳಿತ ಮಾಡ್ತಿರೋ ಕಾಂಗ್ರೆಸ್, ಬಿಬಿಎಂಪಿ ತ್ರಿಭಜನೆಗೆ ಸ್ಕೆಚ್ ಹಾಕಿದೆ. ಅದಕ್ಕಾಗಿ ಸರ್ಕಾರ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ಬಿಬಿಎಂಪಿ ವಿಸರ್ಜಿಸದೆ ಈಗಿರುವ ಸದಸ್ಯರನ್ನೊಳಗೊಂಡಂತೆ ಮೂರು ಪಾಲಿಕೆ ರಚನೆ ಮಾಡಲಿದೆ.

ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರೋ ಸರ್ಕಾರ ಈಗಾಗಲೇ 8 ವಲಯಗಳನ್ನು 10 ವಲಯಗಳನ್ನಾಗಿ ಮರುವಿಂಗಡಣೆ ಮಾಡಿ ಆದೇಶಿಸಿದೆ. ಇನ್ನು 198 ವಾರ್ಡ್‍ಗಳನ್ನು ಜನಸಂಖ್ಯೆ ಆಧಾರದಲ್ಲಿ ವಿಂಗಡಿಸಲು ಸರ್ಕಾರ ತಜ್ಞರ ಸಮಿತಿಗೆ ಸೂಚಿಸಿದೆ. ಜನಸಂಖ್ಯೆ ಅಧಾರದಲ್ಲಿ ವಾರ್ಡ್ ಗಳ ಪುನರ್ ರಚನೆ ಬಿ.ಎ ಪಾಟೀಲ್ ನೇತೃತ್ವದಲ್ಲಿ ನಡೆಯುತ್ತಿದೆ. ಜೆಡಿಎಸ್ ಕೈಕೊಡೋ ಸಾಧ್ಯತೆಯಿದ್ದು, ಅಧಿಕಾರ ಉಳಿಸಿಕೊಳೋ ನಿಟ್ಟಿನಲ್ಲಿ ಈ ವಿಂಗಡನೆ ಕಾಂಗ್ರೆಸ್ ಗೆ ನೆರವಾಗಲಿದೆ.

Courtesy: Public tv

Comments