ದೇವರ ದರ್ಶನಕ್ಕೆ ಆಧಾರ್ ಕಡ್ಡಾಯ : ಕರ್ನಾಟಕ ಸರ್ಕಾರ

01 Sep 2017 4:36 PM | General
448 Report

ಉತ್ತರಾಖಂಡ್‍ನ ಬದ್ರಿನಾಥ್, ಕೇದಾರ್‍ನಾಥ್, ಗಂಗೋತ್ರಿ ಮತ್ತು ಯಮುನೋತ್ರಿ ತೀರ್ಥ ಯಾತ್ರೆಗೆ ಹೋಗುವ ಯಾತ್ರಿಗಳಿಗೆ ಕರ್ನಾಟಕ ಸರ್ಕಾರ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದೆ.

 

ಯಾತ್ರಿಗಳಿಗೆಂದು ನೀಡಲಾಗುವ 20,000 ರೂ. ಸಹಾಯಧನದ ದುರ್ಬಳಕೆ ಆಗದೇ ಇರಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.ಆಗಸ್ಟ್ 17 ರಂದು ಚಾರ್ ಧಾಮ್ ಯಾತ್ರಿಗಳಿಗೆ ನೀಡಲಾಗುವ ಸಬ್ಸಿಡಿ ಬಗ್ಗೆ ಮಾರ್ಗಸೂಚಿಯನ್ನು ಸರ್ಕಾರ ಬಿಡುಗಡೆಗೊಳಿಸಿದ್ದು, ಮಾರ್ಗಸೂಚಿಯಲ್ಲಿ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿರುವ ಅಂಶವನ್ನು ಸೇರಿಸಲಾಗಿದೆ.

ಪ್ರತಿ ವರ್ಷ 1000-1500 ರಾಜ್ಯದ ನಿವಾಸಿಗಳು ಸಬ್ಸಿಡಿ ಪಡೆದುಕೊಳುತ್ತಿದ್ದಾರೆ. ಆದರೆ ಈ ವರ್ಷ ಯಾತ್ರಿಕರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಸಬ್ಸಿಡಿಯ ಹಣವನ್ನು ದುರ್ಬಳಕೆಯನ್ನು ತಡೆಗಟ್ಟಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ ಎಂದು ಮುಜರಾಯಿ ಇಲಾಖೆಯ ಹಿರಿಯ ಅಧಿಕಾರಿ ಹೇಳಿದ್ದಾರೆ. 

 

Courtesy: Public tv

Comments