ಬಿಹಾರ ಪ್ರವಾಹ: 18 ರೈಲುಗಳ ಪ್ರಯಾಣ ಸ್ಥಗಿತ

29 Aug 2017 5:13 PM | General
361 Report

ಬಿಹಾರದಲ್ಲಿ ಸಂಭವಿಸಿದ ಪ್ರವಾಹದಿಂದಾಗಿ ರೈಲ್ವೆ ಇಲಾಖೆಗೆ ₹47ಕೋಟಿ ನಷ್ಟ ಉಂಟಾಗಿದ್ದು, ಪೂರ್ವ ಮಧ್ಯ ರೈಲ್ವೆ ವಿಭಾಗದ 18ರೈಲುಗಳ ಸಂಚಾರವನ್ನು ಮಂಗಳವಾರ ಸ್ಥಗಿತಗೊಳಿಸಲಾಗಿದೆ.

ನವದೆಹಲಿ-ದಿಬ್ರುಗರ್ ರಾಜಧಾನಿ ಎಕ್ಸ್ಪ್ರೆಸ್, ದೆಹಲಿ-ದಿಬ್ರುಗರ್ ಬ್ರಹ್ಮಪುತ್ರ ಮೇಲ್, ಗುವಾಹಟಿ-ಮುಂಬೈ(ಲೋಕಮಾನ್ಯ ತಿಲಕ್ ಎಕ್ಸ್ಪ್ರೆಸ್) ಸೇರಿದಂತೆ ವಿವಿಧ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರೈಲುಗಳ ಸಂಚಾರ ಸ್ಥಗಿತಗೊಂಡಿದೆ.

ಸ್ಥಗಿತಗೊಂಡಿರುವ ಎಲ್ಲ 18 ರೈಲುಗಳ ಸಂಚಾರ ಮಂಗಳವಾರ ಆರಂಭಿಸಿ ಬಿಹಾರ ಮಾರ್ಗವಾಗಿ ತೆರಳಿ ಬುಧವಾರ ಪ್ರಯಾಣವನ್ನು ಪೂರ್ಣಗೊಳಿಸಬೇಕಿತ್ತು.

ಈ ಬಗ್ಗೆ ಪ್ರತಿಕ್ರಯಿಸಿರುವ ಪೂರ್ವ ಮಧ್ಯೆ ರೈಲ್ವೆ ವಿಭಾಗದ ವ್ಯವಸ್ಥಾಪಕ ಡಿಕೆ ಗಯಾನ್ ಅವರು, 'ಆಗಸ್ಟ್ 26ರವರೆಗೆ ರೈಲ್ವೆ ಸಾಮಾಗ್ರಿಗಳ ಹಾನಿಯಿಂದಾಗಿ ₹26.60ಕೋಟಿ ನಷ್ಟ ಉಂಟಾಗಿದೆ. ಪ್ರಯಾಣಿಕರ ಕೊರತೆಯಿಂದಾಗಿ ಸುಮಾರು ₹20ಕೋಟಿ ನಷ್ಟವಾಗಿದೆ. ಪ್ರವಾಹದಿಂದಾಗಿ ಉಂಟಾಗಿರುವ ನಿಖರವಾದ ನಷ್ಟದ ಬಗ್ಗೆ ಪ್ರವಾಹ ಸ್ಥಿತಿ ತಿಳಿಗೊಂಡ ನಂತರವಷ್ಟೇ ತಿಳಿಯಲು ಸಾಧ್ಯ' ಎಂದು ಹೇಳಿದ್ದಾರೆ

Courtesy: prajavani

Comments