ಮೆಕ್ಕಾದಲ್ಲಿ ಇದ್ದರೆ 20 ಲಕ್ಷ ಹಜ್ ಯಾತ್ರಿಗಳು !

29 Aug 2017 12:35 PM | General
293 Report

ಪವಿತ್ರ ಹಜ್ ಯಾತ್ರೆಗಾಗಿ ಸೌದಿ ಅರೇಬಿಯಾದ ಮೆಕ್ಕಾದಲ್ಲಿ ವಿಶ್ವದ ವಿವಿಧ ದೇಶಗಳಿಂದ 20 ಲಕ್ಷ ಮುಸ್ಲಿಮರು ಜಮಾಯಿಸಿದ್ದಾರೆ. ಈ ವರ್ಷ ಇರಾನಿನ ಶಿಯಾ ಮುಸ್ಲಿಮರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ವಿಶೇಷವಾಗಿತ್ತು.

ಅಲ್ಲದೇ ರಾಜಕೀಯ ಬಿಕ್ಕಟ್ಟು, ಇಸ್ಲಾಮಿಕ್ ಸ್ಟೇಟ್ ಉಗ್ರರ ಹಿಂಸಾಚಾರದಿಂದ ನಲುಗಿರುವ ಇರಾಕ್, ಸಿರಿಯಾ ಮತ್ತು ಕೊಲ್ಲಿ ದೇಶಗಳಿಂದಲೂ ಅನೇಕ ಹಜ್ ಯಾತ್ರಿಕರೂ ಮೆಕ್ಕಾದಲ್ಲಿ ಪವಿತ್ರ ಹಜ್‍ನಲ್ಲಿ ಪಾಲ್ಗೊಂಡಿದ್ದಾರೆ.

ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಮಲೇಷ್ಯಾ, ಇಂಡೋನೆಷ್ಯಾ, ಥೈಲೆಂಡ್ ಸೇರಿದಂತೆ ಏಷ್ಯಾದ ಲಕ್ಷಾಂತರ ಮುಸ್ಲಿಮರೂ ಮೆಕ್ಕಾದಲ್ಲಿದ್ದಾರೆ. ವಿಶ್ವದ ಅತಿಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ಇಂಡೋನೆಷ್ಯಾದಿಂದ ಅತಿಹೆಚ್ಚು ಹಜ್ ಯಾತ್ರಿಕರು ಆಗಮಿಸಿದ್ದಾರೆ. ಜೆಡ್ಡಾ ವಿಮಾನನಿಲ್ದಾಣದಿಂದ ಪಶ್ಚಿಮಕ್ಕೆ 80 ಕಿ.ಮೀ.ದೂರದಲ್ಲಿರುವ ಮೆಕ್ಕಾಗೆ ತೆರಳಲು ಪ್ರತಿ ದಿನ ಸಹಸ್ರಾರು ಹಜ್ ಯಾತ್ರಿಕರು ಮುಖ್ಯಪ್ರವೇಶ ದ್ವಾರದ ಮೂಲಕ ಹಾದು ಹೋಗುತ್ತಿದ್ದಾರೆ.  ಹಜ್ ಯಾತ್ರೆ ಮೇಲೂ ಐಎಸ್ ಉಗ್ರರ ದಾಳಿ ಆತಂಕದ ಹಿನ್ನೆಲೆಯಲ್ಲಿ ಅಭೂತಪೂರ್ವ ಬಿಗಿ ಬಂದೋಬಸ್ತ್ ಮಾಡಲಾಗಿದೆ.

Courtesy: eesanje

Comments