ತ್ರಿವರ್ಣ ಬಾಕ್ಸ್ ನಲ್ಲಿ ಶೂ ಗಳನ್ನು ಕಳುಹಿಸಿದ ಚೀನಾ: ಭಾರತೀಯರಿಂದ ಆಕ್ರೋಶ

26 Aug 2017 10:33 PM | General
273 Report

ಉತ್ತರಖಂಡ್ : ಚೀನಾ ಕಂಪನಿ ಮೇಲೆ ಇದೀಗ ಭಾರತಕ್ಕೆ ಅವಮಾನ ಮಾಡಿದ ಆರೋಪ ಕೇಳಿ ಬಂದಿದೆ. ಶೂ ಗಳನ್ನು ತಯಾರಿಸುವ ಚೀನಾ ಮೂಲದ ಕಂಪನಿಯೊಂದು ಭಾರತ ತ್ರಿವರ್ಣ ಧ್ವಜದಿಂದ ಮಾಡಿರುವ ಬಾಕ್ಸ್ ನಲ್ಲಿ ಶೂಗಳನ್ನು ಹಾಕಿ ಭಾರತಕ್ಕೆ ಕಳುಹಿಸಲಾಗುತ್ತಿದೆ ಎಂದು ಮಾಹಿತಿ ದೊರೆತಿದೆ.

ಉತ್ತರಖಂಡ್ : ಚೀನಾ ಕಂಪನಿ ಮೇಲೆ ಇದೀಗ ಭಾರತಕ್ಕೆ ಅವಮಾನ ಮಾಡಿದ ಆರೋಪ ಕೇಳಿ ಬಂದಿದೆ. ಶೂ ಗಳನ್ನು ತಯಾರಿಸುವ ಚೀನಾ ಮೂಲದ ಕಂಪನಿಯೊಂದು ಭಾರತ ತ್ರಿವರ್ಣ ಧ್ವಜದಿಂದ ಮಾಡಿರುವ ಬಾಕ್ಸ್ ನಲ್ಲಿ ಶೂಗಳನ್ನು ಹಾಕಿ ಭಾರತಕ್ಕೆ ಕಳುಹಿಸಲಾಗುತ್ತಿದೆ ಎಂದು ಮಾಹಿತಿ ದೊರೆತಿದೆ. ಉತ್ತರಖಂಡ್ ನ ಅಲ್ಮೋರಾದಲ್ಲಿ ಚೀನಾ ನಿರ್ಮಿತ ಇದೇ ರೀತಿ ಶೂಗಳು ದೊರೆತಿವೆ.. ಈ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಲಾಗಿದ್ದು, ಶೂಗಳನ್ನು ಜಪ್ತಿ ಮಾಡುವಂತೆ ಅಲ್ಲಿನ ಎಸ್ಪಿ ಸೂಚಿಸಿದ್ದಾರೆ ಎನ್ನಲಾಗಿದೆ.

ಬಿಷಾನ್ ಸಿಂಗ್ ಎಂಬ ಅಂಗಡಿ ಮಾಲೀಕ ಮಾರಾಟಕ್ಕಾಗಿ ಶೂಗಳನ್ನು ತರಿಸಿಕೊಂಡಿದ್ದರು. ಈ ವೇಳೆ ಶೂ ಬಾಕ್ಸ್ ಗಳನ್ನು ತೆರೆದಿದ್ದಾರೆ. ಪ್ರತಿ ಪ್ಯಾಕಿಂಗ್ ಮೇಲೆ ತ್ರಿವರ್ಣ ಧ್ವಜದ ಪ್ಯಾಕಿಂಗ್ ಇರುವುದು ಕಂಡಿದೆ. ಬಳಿಕ ಬಾಕ್ಸ್ ಓಪನ್ ಮಾಡಿದಾಗ ಅದರ ಒಳಗಡೆ ಶೂಗಳನ್ನು ಇಡಲಾಗಿತ್ತು. ಇದರಿಂದ ಉತ್ತರಖಂಡ್ ನ ವ್ಯಾಪಾರಿಗಳು ಚೀನಾ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 

Edited By

Shruthi G

Reported By

Sudha Ujja

Comments