ಗಣಪತಿ ಆತ್ಮಹತ್ಯೆಯ ಪ್ರಮುಖ ಸಾಕ್ಷಿಗಳ ನಾಶ? ಇಲ್ಲಿದೆ ಸ್ಫೋಟಕ ಮಾಹಿತಿ

23 Aug 2017 9:30 PM | General
268 Report

ಕಳೆದ ವರ್ಷಾಂತ್ಯಕ್ಕೆ ಕರ್ನಾಟಕದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯಲ್ಲಿ ಭಾರೀ ಪ್ರಮಾಣದ ಲೋಪ ದೋಷಗಳಾಗಿವೆ ಎಂದು ಟೈಮ್ಸ್ ನೌ ವರದಿ ಮಾಡಿದೆ.ಈ ಪ್ರಕರಣದ ತನಿಖೆಯ ವೇಳೆ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಸಂಗ್ರಹಿಸಿದ್ದ ಕೆಲವಾರು ದಾಖಲೆಗಳ ವಿವರಗಳುಳ್ಳ ವರದಿಯ ಪ್ರತಿಗಳನ್ನು ಆಧಾರವಾಗಿಟ್ಟುಕೊಂಡು ವರದಿ ಮಾಡಿರುವ ವಾಹಿನಿಯು, ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಗಂಭೀರವಾದ ಲೋಪಗಳಾ

ವಾಹಿನಿಯು ಹೇಳುವಂತೆ, ವಿಧಿವಿಜ್ಞಾನ ತಜ್ಞರ ವರದಿಯಲ್ಲಿನ ಅಂಶಗಳು ಹೀಗಿವೆ:

- ಸಿಐಡಿ ವರದಿಯಲ್ಲಿ ಗಣಪತಿ ಅವರು ಲಾಡ್ಜ್ ಒಂದರ ಕೊಠಡಿಯೊಂದರಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡಿದ್ದರೆಂದು ಹೇಳಲಾಗಿದೆ. ಆದರೆ, ಅದರ ಫೋಟೋವನ್ನು ತೆಗೆದಿಲ್ಲ.

- ಗಣಪತಿ ಶವ ದೊರೆತ ಸ್ಥಳದಿಂದ ಅವರ ಮೊಬೈಲ್ ವಶಕ್ಕೆ ಪಡೆದಿರುವ ಅಧಿಕಾರಿಗಳಿಂದ ಅದರಲ್ಲಿನ ಅನೇಕ ಮಾಹಿತಿಗಳನ್ನು ಡಿಲೀಟ್ ಮಾಡಲಾಗಿದೆ. ಗಣಪತಿ ಬಳಸುತ್ತಿದ್ದ ಪೆನ್ ಡ್ರೈವ್ ಗಳಿಂದ ಅನೇಕ ಫೈಲ್ ಗಳನ್ನು ಡಿಲೀಟ್ ಮಾಡಲಾಗಿದೆ.

- ಅವರ ಪರ್ಸನಲ್ ಕಂಪ್ಯೂಟರ್ ನಿಂದ 100 ಇ-ಮೇಲ್ ಗಳನ್ನು ಡಿಲೀಟ್ ಮಾಡಲಾಗಿದೆ.

- ಪೆನ್ ಡ್ರೈವ್ ನಿಂದ 145 ಪಿಡಿಎಫ್ ಫೈಲ್ ಗಳು ಡಿಲೀಟ್

- ಮೊಬೈಲ್ ನ ಕಾಲ್ ಲಾಗ್ ನಲ್ಲಿದ್ದ ಕೆಲವಾರು ಕರೆಗಳು, ಹೆಸರುಗಳು ಡಿಲೀಟ್. ಇದರಲ್ಲಿ ಒಬ್ಬ ಮಾಜಿ ಮಂತ್ರಿಯ ಕರೆಗಳು, ಶಾಸಕನ ಕರೆಗಳ ಲಾಗ್ ಡಿಲೀಟ್ ಆಗಿದೆ.

- ಮೊಬೈಲ್ ನಲ್ಲಿದ್ದ 52 ಮೆಸೇಜ್ ಗಳು ಡಿಲೀಟ್ ಆಗಿದೆ.

- ಮೊಬೈಲ್ ನಲ್ಲಿದ್ದ 2500 ಫೋಟೋಗಳು ಡಿಲೀಟ್ ಆಗಿದೆ.

- ಕಂಪ್ಯೂಟರ್ ನಲ್ಲಿದ್ದ 910 ಎಕ್ಸೆಲ್ ಫೈಲ್ ಗಳು ಡಿಲೀಟ್ ಆಗಿದೆ.

- 2699 ಎಂಎಸ್ ವರ್ಡ್ ಫೈನಲ್ ಗಳು ಡಿಲೀಟ್ ಆಗಿದೆ.

- 791 ಟೆಕ್ಸ್ ಫೈಲ್ ಗಳು ಡಿಲೀಟ್ ಆಗಿದೆ.

- ಗಣಪತಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದ ಹೋಟೆಲ್ ಕೊಠಡಿಯ ಚಿಲಕ ಒಳಗಿನಿಂದ ಹಾಕಿರುವುದರ ಬಗ್ಗೆ ಅನುಮಾನ.

- ಗಣಪತಿ ಶವ ನೇತಾಡುತ್ತಿದ್ದ ಸೀಲಿಂಗ್ ಫ್ಯಾನ್ ನ ಮೇಲಿರುವ ಕೆಲವಾರು ಬೆರಳಚ್ಚುಗಳನ್ನು (ಫಿಂಗರ್ ಪ್ರಿಂಟ್ ಗಳನ್ನು) ಪರಿಗಣಿಸಿಲ್ಲ.

- ಅಲ್ಲದೆ, ಫ್ಯಾನಿಗೆ ಗಣಪತಿ ಬಟ್ಟೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಅದರ ಜತೆಗೇ, ಪೊಲೀಸರು ಉಪಯೋಗಿಸುವ ಕ್ಯಾನ್ವಾಸ್ ಬೆಲ್ಟ್ ಕೂಡ ಫೋಟೋದಲ್ಲಿ ಕಾಣುತ್ತಿದೆ. ಇದನ್ನು ಸಿಐಡಿಯು ತನಿಖೆಯಲ್ಲಿ ಪರಿಗಣಿಸಿಲ್ಲ.

- ಆತ್ಮಹತ್ಯೆ ನಡೆದ ಸ್ಥಳದಲ್ಲಿ ಎರಡು ಹಾರಿಸಿರುವ ಬುಲೆಟ್ ಗಳ ಗುರುತು ಹಾಗೂ ಸಿಡಿದ ಗುಂಡಿನ ಚೂರುಗಳು ಪತ್ತೆಯಾಗಿದ್ದರ ಬಗ್ಗೆ ಮಾಹಿತಿ ಇಲ್ಲ.

Courtesy: oneindia kannada

Comments