ತಲಾಖ್.. ತಲಾಖ್ : ಕೇಂದ್ರ ಹೊಸ ಕಾನೂನು ರಚಿಸಲ್ಲ, ಕಾಯ್ದೆ ತಿದ್ದುಪಡಿಗೆ ಚಿಂತನೆ?

23 Aug 2017 1:20 PM | General
254 Report

ನವದೆಹಲಿ: ತ್ರಿವಳಿ ತಲಾಖ್ ಸಾಂವಿಧಾನಿಕವಲ್ಲ ಎಂದು ಸುಪ್ರೀಂಕೋರ್ಟ್ ಪಂಚಪೀಠ ಮಹತ್ವದ ತೀರ್ಪು ನೀಡಿದೆ. ಮೂರು ಬಾರಿ ತಲಾಖ್ ಎಂದು ಹೇಳಿ ತಲಾಖ್ ನೀಡುವ ಪದ್ಧತಿ ಮುಸ್ಲಿಂ ಮಹಿಳೆಯರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಆದ್ರೆ ತ್ರಿವಳಿ ತಲಾಖ್ ಪದ್ಧತಿ ರದ್ದುಗೊಳಿಸಿ ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ಇದರ ಬದಲಾಗಿ ಹೊಸ ಕಾನೂನು ರಚಿಸುವಂತೆ ಕೇಂದ್ರಕ್ಕೆ ಆದೇಶಿಸಿತ್ತು.ಆದರೆ ಕೇಂದ್ರ ಸರ್ಕಾರ ಇದರ ಬದಲಾಗಿ ಹೊಸ ಕಾನೂನು ರೂಪಿಸಲ್ಲ ಎಂದಿದೆ. ಅದರ ಬದಲಾಗಿ 1937 ರ ಮುಸ್ಲಿಂ ವೈಯಕ್ತಿಕ  ಕಾನೂನು ಮಂಡಳಿ ಕಾಯ್ದೆಯಲ್ಲಿ ಕೆಲವು ತಿದ್ದುಪಡಿ ಮಾಡಲು ಚಿಂತನೆ ನಡೆಸುತ್ತಿದ್ದೇವೆ ಎಂದು ಕೇಂದ್ರ ಹೇಳಿದೆ. ಈಗಾಗಲೇ ಸುಪ್ರೀಂಕೋರ್ಟ್ ತ್ರಿವಳಿ ತಲಾಖ್ ಅಸಂವಿಧಾನಿಕ ಮತ್ತು ಕಾನೂನು ಬಾಹಿರ ಎಂದಿರುವ ಕಾರಣ ಹೊಸ ಕಾನೂನು ರೂಪಿಸದೇ ಇರಲು ಕೇಂದ್ರ ನಿರ್ಧರಿಸಿದೆ. ಅದರೆ ಈಗಿರುವ ಕಾನೂನಿಗೇ ತಿದ್ದುಪಡಿ ತರಲಿದೆ.

Edited By

venki swamy

Reported By

Sudha Ujja

Comments