ಕ್ಯಾಂಟಿನ್ ಬಳಿಕ, 100 ವಸತಿ ಶಾಲೆಗಳಿಗೆ 'ಇಂದಿರಾ' ಹೆಸರು?

16 Aug 2017 1:04 PM | General
395 Report

ಬೆಂಗಳೂರು: ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ ಮೂಲಕ ಸುದ್ದಿ  ಮಾಡುತ್ತಿರುವ ಕಾಂಗ್ರೆಸ ಸರ್ಕಾರ ಈಗ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಗಳನ್ನಾಗಿ ಸದ್ದಿಲ್ಲದೇ ಪರಿವರ್ತಿಸುತ್ತಿದೆ. ಎಂದು ಮೂಲಗಳಿಂದ ತಿಳಿದು ಬಂದಿದೆ.

ಮತ್ತೊಂದು ಮೂಲಗಳ ಪ್ರಕಾರ, ಸಮಾಜ ಕಲ್ಯಾಣ ಸಚಿವರ ಸೂಚನೆ ಮೇರೆಗೆ 100 ವಸತಿ ಶಾಲೆಗಳಿಗೆ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಗಳೆಂದು ಹೆಸರಿಸಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಕೇಂದ್ರ ಸರ್ಕಾರ ನವೋದಯ ವಸತಿ ಶಾಲೆ ಮಾದರಿಯಲ್ಲೇ ರಾಜ್ಯದಲ್ಲೂ ಮೊರಾರ್ಜಿದೇಸಾಯಿ ವಸತಿ ಶಾಲೆಗನ್ನು ಈ ಹಿಂದೆ ಮಂಜೂರುಗೊಳಿಸಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆ ಜತೆಗೆ ವಿದ್ಯಾರ್ಥಿಯನಿಯರಿಗೆ ಪ್ರತ್ಯೇಕವಾಗಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳನ್ನು ರಾಜ್ಯ ಸರ್ಕಾರ ಈ ಹಿಂದೆಯೇ ಆರಂಭಿಸಿದೆ. 2016-17ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಯ 145, ಪರಿಶಿಷ್ಟ ಪಂಗಡದ 125 ಹಾಗೂ ಹಿಂದುಳಿದ ವರ್ಗಗಳ 8 ವಸತಿ ಶಾಲೆ ಸೇರಿ ರಾಜ್ಯಾದ್ಯಂತ 278 ಶಾಲೆಗಳನ್ನು ಮಂಜೂರುಗೊಳಿಸಲಾಗಿತ್ತು. ಹೊಸದಾಗಿ ಮಂಜೂರಾದ ಕೆಲವು ವಸತಿ ಶಾಲೆಗಳಿಗೆ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ ಶಾಲೆಗಳಿಗೂ ಮಂಜೂರು ನೀಡಲಾಗಿದೆ.

Edited By

Suhas Test

Reported By

Sudha Ujja

Comments