ಮಂಗಳೂರು ವಿವಿ ಹೊಸ ವಿವಾದ, ಸೈನಿಕರ ವಿರುದ್ಧ ಪಠ್ಯ ಪುಸ್ತಕದಲ್ಲಿ ಬರಗೂರು ಲೇಖನ

10 Aug 2017 3:45 PM | General
357 Report

ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ಮಂಗಳೂರು ವಿವಿ ಪ್ರಕಟಿಸಿರುವ ಪ್ರಥಮ ಬಿಸಿಎ ಕನ್ನಡ ಪಠ್ಯ ಪುಸ್ತಕದಲ್ಲಿ ಗಡಿ ಕಾಯುವ ಸೈನಿಕರನ್ನು  ಅತ್ಯಾಚಾರಿಗಳೆಂದು ಬಿಂಬಿಸಿದೆ.ಸಾಹಿತಿ ಬರಗೂರು ರಾಮಚಂದ್ರಪ್ಪನವರು ಬರೆದಿರುವ ಯುದ್ಧ ಒಂದು ಉದ್ಯಮ ಎಂಬ ಪಠ್ಯವೊಂದರಲ್ಲಿರುವ ಅಂಶ ಈಗ ವಿವಾದಕ್ಕೆ ಕಾರಣವಾಗಿದೆ.

ಈ ಲೇಖನದಲ್ಲಿ ತಮ್ಮ ಸ್ನೇಹಿತನಾಗಿರುವ ಸೈನಿಕನ ಮಾತುಗಳನ್ನು ಉಲ್ಲೇಖಿಸಿ ಬರಗೂರು ರಾಮಚಂದ್ರಪ್ಪನವರು ಬರೆದಿದ್ದಾರೆ. ಗಡಿಗಳಲ್ಲಿ ಯುದ್ಧ ನಡೆದಾಗ ಅತ್ಯಾಚಾರವೂ ನಡೆಯುತ್ತದೆ ಎಂದು ಬರೆಯಲಾಗಿದೆ.ಹೀಗಾಗಿ ಇದು ಭಾರೀ ಟೀಕೆಗೆ ಗುರಿಯಾಗಿದೆ. ವಿವಿ ಪ್ರಸರಾಂಗದ ವಿರುದ್ಧ ಟೀಕೆ ಕೇಳಿ ಬಂದಿದೆ. ಅಲ್ಲದೇ ವಿದ್ಯಾರ್ಥಿಗಳು ಓದುವ ಪಠ್ಯದಲ್ಲಿ ಆಧಾರರಹಿತ ಹೇಳಿಕೆಗಳು ದಾಖಲಾಗಿವೆ.

ಪಠ್ಯದಲ್ಲಿ ಏನಿದೆ?

ಗಡಿ ಪ್ರದೇಶದಲ್ಲಿ ಪರಸ್ಪರ ಕ್ರೌರ್ಯದ ಪ್ರದರ್ಶನ ಮಾಡುವ ಪರಾಕ್ರಮಿಗಳು ಇದ್ದೇ ಇರುತ್ತಾರೆಂಬುದು ನನ್ನ ಗೆಳೆಯನ ಅನುಭವದ ಮಾತು. ಪರಸ್ಪರ ಮುತ್ತಿಗೆ ನಡೆದಾಗ ಗಡಿಯ ಗ್ರಾಮಗಳಲ್ಲಿ ಅತ್ಯಾಚಾರವು ನಡೆಯುತ್ತದೆಯೆಂದೂ ಎರಡು ರಾಷ್ಟ್ರಗಳ ಕೆಲವು ಸೈನಿಕರು ಇದರಲ್ಲಿ ಭಾಗಿಗಳೆಂದೂ ಈ ಗೆಳೆಯ ಘಟನೆಗಳು ಸಮೇತ ವಿವರಿಸುತ್ತಾನೆ. ನಾವು ಸಾಮಾನ್ಯವಾಗಿ ನಮ್ಮವರೆಲ್ಲ ಸಜ್ಜನರೂ ಸಂಭಾವಿತರೂ ಎಂದು ನಂಬಿರುತ್ತೇವೆ ಅಥವಾ ಹಾಗೆ ನಂಬಿಸಲಾಗಿರುತ್ತದೆ.

 

 

 

Edited By

Suhas Test

Reported By

Sudha Ujja

Comments