ಪಟಾಕಿಯಲ್ಲಿ ಬಳಸುವ 5 ರಾಸಾಯನಿಕಗಳಿಗೆ ಸುಪ್ರೀಂ ನಿಷೇಧ

03 Aug 2017 12:05 PM | General
500 Report

ಬೆಳಕಿನ ಹಬ್ಬ ದೀಪಾವಳಿಗೆ ಸುಮಾರು ಮೂರು ತಿಂಗಳು ಇರುವಾಗಲೇ ಪಟಾಕಿಗಳು, ಬಾಣ-ಬಿರುಸುಗಳು ಮತ್ತು ಸಿಡಿಮದ್ದುಗಳ ಉತ್ಪಾದನೆಯಲ್ಲಿ ಐದು ಹಾನಿಕರ ಲೋಹಗಳು ಮತ್ತು ರಾಸಾಯನಿಕಗಳ ಬಳಕೆಗೆ ಸುಪ್ರೀಂಕೋರ್ಟ್ ನಿಷೇಧ ವಿಧಿಸಿದೆ.

 ಇದರಿಂದಾಗಿ ಕೆಲವು ಪಟಾಕಿಗಳು ತನ್ನ ಆಕರ್ಷಣೆ ಮತ್ತು ಸಾಮರ್ಥ್ಯ  ಕಳೆದಕೊಳ್ಳಲಿವೆ. ಸರ್ವೋಚ್ಚ ನ್ಯಾಯಾಲಯದ ಈ ಆದೇಶದಿಂದ ಪಟಾಕಿ ತಯಾರಕರ ಮೇಲೆ ಪರಿಣಾಮ ಬೀರಿದೆ.
ಸೀಸ, ಪಾದರಸ, ಲಿಥಿಯಂ, ಆರ್ಸೆನಿಕ್ ಮತ್ತು ಅಂಜನಕಲ್ಲು ಈ ಐದು ಲೋಹಗಳು ಮತ್ತು ರಾಸಾಯನಿಕಗಳನ್ನು ಪಟಾಕಿ ತಯಾರಿಕೆ ಸಂದರ್ಭದಲ್ಲಿ ಉಪಯೋಗಿಸಬಾರದು ಎಂದು ನ್ಯಾಯಮೂರ್ತಿ ಮದನ್ ಬಿ. ಲೋಕುರ್ ನೇತೃತ್ವದ ಸುಪ್ರೀಂಕೋರ್ಟ್ ವಿಭಾಗೀಯ ಪೀಠ ಹೇಳಿದೆ.

ಪಟಾಕಿ ಮತ್ತು ಬಾಣ-ಬಿರುಸುಗಳನ್ನು ಸಿಡಿಸುವ ಸಂಬಂಧ ಉಂಟಾಗುವ ವಾಯುಮಾಲಿನ್ಯದ ಮಾನದಂಡ ಕುರಿತು ಇನ್ನೂ ನಿರ್ಧರಿಸಿಲ್ಲ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ನ್ಯಾಯಪೀಠಕ್ಕೆ ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಅಲ್ಲಿಯತನಕ ಈ ಐದು ಅಪಾಯಕಾರಿ ಲೋಹಗಳು ಮತ್ತು ರಾಸಾಯನಿಕಗಳನ್ನು ಪಟಾಕಿ ಉತ್ಪಾದಕರು ಬಳಸದಂತೆ ನಿರ್ಬಂಧಿಸಲಾಗುವುದು ಎಂದು ಕೋರ್ಟ್ ತಿಳಿಸಿತು. 
ಈ ಆದೇಶ ಪಾಲನೆಯ ಜವಾಬ್ದಾರಿಯು ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆಗೆ(ಪಿಎಎಸ್‍ಒ) ಸೇರಿದ್ದಾಗಿದೆ ಎಂದು ನ್ಯಾಯಪೀಠ ಹೇಳಿದೆ.

 

 

Courtesy: eesanje

Comments