ಜೂನ್ 1ರಿಂದ ತಮಿಳುನಾಡಿಗೆ 2.2ಟಿಎಂಸಿ ನೀರು ಹರಿಸಿದ ಕರ್ನಾಟಕ

ಬೆಂಗಳೂರು, ಜುಲೈ 18: ಮುಂಗಾರು ಕೊರತೆಯ ನಡುವೆಯೂ ಜೂನ್ 1ರಿಂದ ಕರ್ನಾಟಕ ತಮಿಳುನಾಡಿಗೆ 2.2 ಟಿಎಂಸಿ ನೀರು ಹರಿಸಿದೆ.
ಕಾವೇರಿ ಜಲಾನಯನ ಪ್ರದೇಶಲ್ಲಿ ಸಿಗುವ ಒಳಹರಿವಿನ ಶೇಕಡಾ 20-30 ರಷ್ಟು ನೀರನ್ನು ಕರ್ನಾಟಕ ತಮಿಳುನಾಡಿಗೆ ಬಿಡುತ್ತಿದೆ. ಸುಪ್ರಿಂ ಕೋರ್ಟ್ ಆದೇಶದನ್ವಯ ಈ ನೀರು ಬಿಡಲಾಗುತ್ತಿದೆ ಎಂದು ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
ಇನ್ನು ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ಜುಲೈ 2ರಂದು ಮಂಡ್ಯದ ಗಜಲಗೆರೆ ಮತ್ತು ಇಳವಾಲ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಜೂನ್ 30ರಂದೂ ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ರೈತರು ಮತ್ತು ಕನ್ನಡ ಪರ ಸಂಘಟನೆ ಕಾರ್ಯಕರ್ತರು ಶ್ರೀರಂಗಪಟ್ಟಣದ ಸಮೀಪ ಕಾವೇರಿ ನದಿಗೆ ಇಳಿದು ಪ್ರತಿಭಟನೆ ನಡೆಸಿದ್ದರು.
Comments