ಪಾಕಿಸ್ತಾನದಲ್ಲಿದೆ 1,500 ವರ್ಷಗಳ ಹನುಮಂತನ ದೇಗುಲ!

18 Jul 2017 2:01 PM | General
640 Report

ಸದಾ ಧರ್ಮದ ವಿಚಾರಕ್ಕಾಗಿಯೇ ಜಗಳವಾಡುವ ಪಾಕಿಸ್ತಾನ ದೇಶ . ಆ ನೆಲದಲ್ಲಿ ಮುಸ್ಲಿಂ ಧರ್ಮವೇ ಶ್ರೇಷ್ಠವಾದದ್ದು. ಹೀಗಿದ್ದರೂ ಅಲ್ಲೊಂದು ಹಿಂದೂ ದೇವಾಲಯವಿದೆ ಎಂದು ಹೇಳಿದರೆ ಎಷ್ಟು ಆಶ್ಚರ್ಯವಾಗುತ್ತದೆ ಅಲ್ಲವಾ? ಅದೂ ನಿನ್ನೆ ಮೊನ್ನೆಯಷ್ಟೇ ನಿರ್ಮಾಣವಾದದ್ದಲ್ಲ. ಸಾವಿರಾರು ವರ್ಷಗಳಷ್ಟು ಪುರಾತನ ಕಾಲದ್ದು. ಅಂದಿನಿಂದ ಇಂದಿನ ವರೆಗೂ ದೇವಾಲಯದಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತಲೇ ಇವೆ. ಹೌದು, ಅದು ಹನುಮಂತನ ದೇಗುಲ, ಸರಿ ಸುಮಾರು

ಸ್ವಾಭಾವಿಕವಾಗಿ ಕಾಣಿಸಿಕೊಂಡ ಪಂಚಮುಖಿ ದೇಗುಲ. ಶತಮಾನಗಳಿಂದಲೂ ಭಕ್ತರು ಪೂಜಿಸುತ್ತಾರೆ. ಈ ದೇವಾಲಯವು ಹನುಮಂತನ ಎಲ್ಲಾ ಐದು ಅಂಶಗಳನ್ನು ಹೊಂದಿದೆ. ಈ ಮೂರ್ತಿಯಲ್ಲಿ ನರಸಿಂಹ, ಆದಿವರಾಹ, ಹಯಗ್ರೀವಾ, ಹನುಮಂತ ಹಾಗೂ ಗರುಡನ ಮುಖ ಇರುವುದನ್ನು ಕಾಣಬಹುದು.

11ರ ಸಂಖ್ಯೆಯ ನಂಟು ಶತಮಾನಗಳ ಹಿಂದೆ ನೀಲಿ ಮತ್ತು ಬಿಳಿ ಬಣ್ಣದ 8 ಅಡಿ ಎತ್ತರದ ಹನುಮಂತನ ಮೂರ್ತಿ ಇಲ್ಲಿ ಗೋಚರವಾಯಿತು. ನಂತರ ಮೂರ್ತಿಯ ವಿಗ್ರಹದ ಮೇಲೆ ಇರುವ 11 ಮುಷ್ಟಿ ಮಣ್ಣನ್ನು ತೆಗೆದು ಸ್ವಚ್ಛಮಾಡಲಾಯಿತು. ಹಾಗಾಗಿಯೇ ಇಲ್ಲಿ ಭಕ್ತರು ವಿಗ್ರಹದ ಸುತ್ತ 11 ಸುತ್ತು ಸುತ್ತುತ್ತಾರೆ. ಹೀಗೆ ಮಾಡುವುದು ಶ್ರೇಷ್ಠ ಮತ್ತು ಪುಣ್ಯ ಎನ್ನುವ ನಂಬಿಕೆ ಇದೆ.

ದೇಗುಲದ ನವೀಕರಣ ಈ ದೇವಾಲಯವನ್ನು 2012ರಲ್ಲಿ ನವೀಕರಣ ಮಾಡಲಾಯಿತು. ಮೊದಲು ಹಳದಿ ಬಣ್ಣವಿದ್ದ ದೇಗುಲವನ್ನು ಈಗ ಪುನರ್ ನವೀಕರಣ ಮಾಡಲಾಗಿದೆ. ಅಲ್ಲದೆ ವಾಸ್ತುಶಿಲ್ಪಗಳ ಸಂರಕ್ಷಣೆ ಮಾಡಲಾಗಿದೆ ಎನ್ನಲಾಗುತ್ತದೆ.

 ಒತ್ತುವರಿ ಜಾಗ ದೇಗುಲದ ಆಸ್ತಿ ಎಂದು ಒತ್ತುವರಿ ಮಾಡಿಕೊಂಡ ಪ್ರದೇಶಗಳನ್ನು ಜಿಲ್ಲಾಡಳಿತವು ತೆರವುಗೊಳಿಸಿದೆ. ಹಾಗಾಗಿ ದೇಗುಲವು ಸಾಧಾರಣ ವಿಸ್ತೀರ್ಣದಲ್ಲಿದೆ ಎನ್ನಬಹುದು.ಕಾಳಿ ದೇವಿ ಹನುಮಾನ್ ಮಂದಿರದಿಂದ ಸ್ವಲ್ಪ ದೂರದಲ್ಲಿ ಕಾಳಿ ದೇವಿಗೆ ಮೀಸಲಿರುವ ಇನ್ನೊಂದು ಹಿಂದೂ ದೇಗುಲವಿದೆ. ಇದೂ ಸಹ ಹಲವಾರು ಶತಮಾನಗಳ ಹಿನ್ನೆಲೆಯನ್ನು ಹೊಂದಿದೆ. ಇಲ್ಲಿ ಪುರಾತನಕಾಲದ  ಹಲವಾರು ಪುರಾವೆಗಳಿವೆ.

Edited By

venki swamy

Reported By

Sudha Ujja

Comments