ಯೋಗಾ ಮಾಡಿಲ್ಲ ಅಂದ್ರೆ ಎಂಜಿನಿಯರಿಂಗ್ ಡಿಗ್ರಿ ಸೀಗೋದಿಲ್ಲ!!

12 Jul 2017 11:46 AM | General
516 Report

ಯೋಗಾ ಹಾಗೂ ಕ್ರೀಡೆಗಳಲ್ಲಿ ಕಡ್ಡಾಯವಾಗಿ ಭಾಗಿಯಾಗುವುದನ್ನು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕಡ್ಡಾಯ ಮಾಡಲಾಗಿದೆ

ಎಂಜಿನಿಯರಿಂಗ್ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ಸುದ್ದಿ ಮಹತ್ವ ಪೂರ್ಣವಾಗಿದೆ. ಎಂಜಿನಿಯರಿಂಗ್ ನಲ್ಲಿ ನೀವೂ ಅಧ್ಯಯನ ಮಾಡುತ್ತಿದ್ದರೆ ಯೋಗಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅನಿವಾರ್ಯ. ಯೋಗಾ ಹಾಗೂ ಕ್ರೀಡೆಗಳಲ್ಲಿ ಕಡ್ಡಾಯವಾಗಿ ಭಾಗಿಯಾಗುವುದನ್ನು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ  ಕಡ್ಡಾಯ ಮಾಡಲಾಗಿದೆ. ಯೋಗಾ ಚಟುವಟಿಕೆಗಳಲ್ಲಿ ಭಾಗಿಯಾಗದ ವಿದ್ಯಾರ್ಥಿಗಳಿಗೆ ಸೂರತ್ ನಲ್ಲಿ ಪದವಿ ಪ್ರಶಸ್ತಿ ಸೀಗೋದಿಲ್ಲ.

ಎಂಜಿನಿಯರಿಂಗ್ ಅಧ್ಯಯನ ಮಾಡುತ್ತಿರುವವರಿಗೆ ಈ ಮೊದಲು ಯಾವುದೇ ನಿಯಮಗಳಿರಲಿಲ್ಲ. ಆದರೆ  ಚಟುವಟಿಕೆಗಳಲ್ಲಿ ಭಾಗಿಯಾಗುವುದನ್ನು ಕಡ್ಡಾಯಗೊಳಿಸಲಾಗಿದೆ. ಇನ್ನು ರಾಷ್ಟ್ರೀಯ ಸಾಮಾಜಿಕ ಸೇವೆ (ಎನ್ ಎಸ್ಎಸ್), ಹಾಗೂ ನ್ಯಾಷನಲ್ ಕೆಡೆಟ್ ಕಾರ್ಪ್ (ಎನ್ ಸಿಸಿ) , ಭಾರತ ಉನ್ನತ ಅಭಿಯಾನ ನಂತಹ ಹಲವು ಸಂಸ್ಥೆಗಳು ಇವೆ. ಆದ್ರೆ ಪದವಿ ಗಳಿಸಲು ಇವೆಲ್ಲಾ ಅನಿವಾರ್ಯವಾಗಿರಲಿಲ್ಲ. ಈಗ ಅಖಿಲಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE)ಸೂರತ್ ನಲ್ಲಿ ಕಡ್ಡಾಯ ಮಾಡಿದೆ. ಇಂತಹ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಹಾಜರಾತಿ ಕನಿಷ್ಠ ಶೇ 25 ರಷ್ಟು ಇರಬೇಕು. AICTE ಅಡಿಯಲ್ಲಿ 10 ಸಾವಿರ ಸಂಸ್ಥೆಗಳು ವ್ಯಾಪ್ತಿಗೆ ಬರುತ್ತವೆ. ಸುಮಾರು 18 ಲಕ್ಷ ಪದವಿಧರರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

Edited By

venki swamy

Reported By

Sudha Ujja

Comments