ಟ್ವಿಟರ್ ಗೆ ಎಂಟ್ರಿ ನೀಡಿದ ನೊಬೆಲ್ ಶಾಂತಿ ಪುರಸ್ಕೃತೆ

08 Jul 2017 12:08 PM | General
433 Report

ಲಂಡನ್: ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸಫ್ಜೈ ಖಾನ್ ಶುಕ್ರವಾರದಂದು ಟ್ವಿಟರ್ ಖಾತೆಗೆ ಎಂಟ್ರಿ ನೀಡಿದ್ದಾರೆ.ಅಪಾರ ಅಭಿಮಾನಿಗಳನ್ನು  ಸಂಪಾದಿಸಿರುವ ಮಲಾಲಾ ತಮ್ಮ ಮೊದಲ ದಿನದ ಟ್ವಿಟರ್ ನಲ್ಲಿ ಇಂದು ನನ್ನ ಶಾಲಾ ದಿನದ ಕೊನೆಯ ದಿನ ಎಂದು ತಾನು ಹೊಸದಾಗಿ ತೆಗೆದಿರುವ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.  

ಸಾಮಾಜಿಕ ಮಾಧ್ಯಮವನ್ನು ಒಂದು ವೇದಿಕೆಯನ್ನಾಗಿ ಬಳಕೆ ಮಾಡಿಕೊಳ್ಳುವುದಕ್ಕೆ 19 ವರ್ಷದ ಮಲಾಲಾ ತಯಾರಾಗಿದ್ದು, 

ಟ್ವಿಟರ್ ಗೆ ಎಂಟ್ರಿ ನೀಡಿದ ಮೊದಲ ದಿನದಲ್ಲೇ 1,34,000 ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.  ಮಲಾಲಾ  ಹೆಣ್ಣುಮಕ್ಕಳ 

ಶಿಕ್ಷಣಕ್ಕಾಗಿ ಹೋರಾಟ ಮಾಡಲು ಮಧ್ಯಪ್ರಾಂತ್ಯ ಆಫ್ರಿಕಾ ಹಾಗೂ ಲ್ಯಾಟಿನ್ ಅಮೆರಿಕಾದಲ್ಲಿ ಹುಡುಗಿಯರನ್ನು ಭೇಟಿ 

ಮಾಡುವುದಾಗಿ ತಿಳಿಸಿದ್ದಾರೆ.  ಮಲಾಲಾಗೆ ಈ ತಿಂಗಳಿಗೆ 20 ವರುಷ ತುಂಬುತ್ತದೆ. 2012ರಲ್ಲಿ ಅಕ್ಟೋಂಬರ್ ತಿಂಗಳಲ್ಲಿ ತಲೆಗೆ 

ಗುಂಡೇಟು ಬಿದ್ದು ಇಂಗ್ಲೆಂಡ್ ನ ಬರ್ಮಿಂಗ್ಹ್ಯಾಮ್ ನಲ್ಲಿ ಚಿಕಿತ್ಸೆ ಪಡೆದ ನಂತರ ಅದೇ ನಗರದಲ್ಲಿ ಶಾಲಾ ವ್ಯಾಸಂಗ ಮಾಡುತ್ತಿದ್ದಳು.  

2014ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಗಳಿಸಿದ 17 ವಯಸ್ಸಿನಲ್ಲಿ ಮಲಾಲಾ ಅತಿ ಚಿಕ್ಕ ವಯಸ್ಸಿನಲ್ಲೇ ನೊಬೆಲ್ ಗರಿ 

ಪಡೆದುಕೊಂಡಿದ್ದಾರೆ. ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಅರಿವು ಮೂಡಿಸುತ್ತಿರುವ ಮಲಾಲಾ ಹಲವು ಕ್ಯಾಂಪೇನ್ ಗಳಲ್ಲಿ ಭಾಗವಹಿಸಿ ಹೆಣ್ಣು 

ಮಕ್ಕಳ ಶಿಕ್ಷಣಕ್ಕಾಗಿ ಅರಿವು ಮೂಡಿಸುತ್ತಿದ್ದಾರೆ. 

Edited By

venki swamy

Reported By

Sudha Ujja

Comments