ಒಂದು ಹಾರ್ಟ್ ಬೀಟ್ ಕಥೆ!! ಹೃದಯ ಬಡಿತಕ್ಕೆ ಸಾಕ್ಷಿಯಾದ ಘಳಿಗೆ

07 Jul 2017 5:25 PM | General
428 Report

ಪುಣೆ: ಮನುಷ್ಯನ ದೇಹಕ್ಕೆ ಸಾವಿದೆಯೇ ಹೊರೆತು, ಆತ್ಮಕ್ಕಲ್ಲ ಎನ್ನುವ ಮಾತಿದೆ. ದೇಹ ಮಣ್ಣು ಸೇರಿದ್ರು ನಮ್ಮ ಹೃದಯ ಮಾತ್ರ 

ಮತ್ತಾರದ್ದೋ ದೇಹ ಸೇರಿ ಚಟುವಟಿಕೆಯಿಂದ ಬಡಿತ ಆರಂಭಿಸುತ್ತದೆ. ಇಂಥದ್ದೇ ಉದಾಹರಣೆ ಇಲ್ಲಿ ನಡೆದಿದೆ.​

 ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಹೃದಯ, ಲಿವರ್ ಕವಾಟಗಳನ್ನು ಪುಣೆ ಏರಪೋರ್ಟ್ ನಿಂದ ರುಬಿ ಹಾಲ್ ಕ್ಲಿನಿಕ್ ಗೆ ಕೇವಲ 6 

ನಿಮಿಷಗಳಲ್ಲೇ ಯಶಸ್ವಿಯಾಗಿ ಸಾಗಿಸಲಾಗಿದೆ. ನಾಸಿಕ್ ಮೂಲದ 35 ವರ್ಷದ ವ್ಯಕ್ತಿಯೊಬ್ಬರು ರೋಡ್ ಅಪಘಾತಕ್ಕೆ ಈಡಾಗಿ 

ಸಾವನ್ನಪ್ಪಿದ್ರು, ಕುಟುಂಬದವರು ಮೃತರ ಅಂಗಾಂಗಳನ್ನು ದಾನ ಮಾಡಲು ನಿರ್ಧರಿಸಿದ್ದರು. ಅದರಂತೆ ಪುಣೆ ವಿಮಾನ 

ನಿಲ್ದಾಣದಿಂದ ರೂಬಿ ಹಾಲ್ ಚಿಕಿತ್ಸಾಲಯಕ್ಕೆ 6 ನಿಮಿಷದಲ್ಲೇ ರವಾನೆ ಮಾಡಲಾಗಿದೆ. 

ರೂಬಿ ಹಾಲ್ ಕ್ಲಿನಿಕ್ ನಲ್ಲಿ ಕಾರ್ಡಿಯೋಮಯೋಪಥಿಯಿಂದ ಬಳಲುತ್ತಿದ್ದ 29 ವಯಸ್ಸಿನ ಮಹಿಳೆಗೆ ದೇಹದ ಜೀವಂತ 

ಅಂಗಾಂಗಳನ್ನು ಯಶಸ್ವಿಯಾಗಿ ಜೋಡಿಸಲಾಯಿತು. ಹಸಿರು ಕಾರಿಡಾರ್ ಮೂಲಕ ಪುಣೆ ವಿಮಾನ ನಿಲ್ದಾಣದಿಂದ ರೂಬಿ ಕ್ಲಿನಿಕ್ ಗೆ 

ಕೇವಲ 6 ನಿಮಿಷದಲ್ಲಿ ರವಾನೆ ಮಾಡಿರುವುದು ಮೆಚ್ಚುಗೆ ವಿಷಯ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. 

Edited By

venki swamy

Reported By

Sudha Ujja

Comments