2018ರ ವೇಳೆಗೆ ತಯಾರಾಗಲಿವೆ 51 ಲಕ್ಷ ಮನೆಗಳು

07 Jul 2017 3:41 PM | General
434 Report

ನವದೆಹಲಿ: ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 2018ರ ವೇಳೆಗೆ ಸುಮಾರು 51 ಲಕ್ಷ ಮನೆಗಳು ನಿರ್ಮಾಣ ಮಾಡುವ 

ಯೋಜನೆ ರೂಪಿಸಿಲಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಆಯಾ ರಾಜ್ಯ ಸರ್ಕಾರಗಳ ಸಹಯೋಗದಿಂದ 

ಮಾರ್ಚ್ 2018ರಲ್ಲಿ 1.5 ದಶಲಕ್ಷ ವೆಚ್ಚದಲ್ಲಿ ಉತ್ತಮ ಗುಣಮಟ್ಟದಲ್ಲಿ ಗೃಹ ನಿರ್ಮಾಣ ನಿರ್ಮಿಸುವ ಯೋಜನೆ ಇದೆ ಎಂದು ತಿಳಿದು 

ಬಂದಿದೆ.  

ಗ್ರಾಮೀಣ ವಿಕಾಸ್ ಸಚಿವಾಲಯದ ಮಾಹಿತಿ ಪ್ರಕಾರ, ರಾಜ್ಯ ಸರ್ಕಾರಗಳ ಸಹಯೋಗದಿಂದ ಮಾರ್ಚ್ 2018 ರವೇಳೆಗೆ 51 ಲಕ್ಷ 

ಗ್ರಾಮೀಣ ಆವಾಸ್ ಮನೆಗಳ ನಿರ್ಮಾಣವಾಗಲಿದ್ದು. ಇದುವರೆಗೆ ಆವಾಸ್ ಯೋಜನೆ ಅಡಿಯಲ್ಲಿ 55 ಸಾವಿರ ಮನೆಗಳನ್ನು 

ನಿರ್ಮಾಣಗೊಂಡಿವೆ.10 ಲಕ್ಷ ಮನೆಗಳು ನಿರ್ಮಾಣ ಹಂತದಲ್ಲಿವೆ. ಬಿಹಾರ್, ಉತ್ತರಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಮನೆಗಳ

ನಿರ್ಮಾಣ ಸಂಖ್ಯೆಯನ್ನು ಹೆಚ್ಚಿಸಲಾಗಿದೆ.  

Edited By

venki swamy

Reported By

Sudha Ujja

Comments