ಉಪನ್ಯಾಸಕಿಯರು ಕಡ್ಡಾಯ ಸೀರೆ ಉಡುವಂತೆ ಸುತ್ತೋಲೆ ಹೊರಡಿಸಿದ ಶಿಕ್ಷಣ ಇಲಾಖೆ

06 Jul 2017 11:27 AM | General
627 Report

ಬೆಂಗಳೂರು: ಉಪನ್ಯಾಸಕಿಯರು ಕಡ್ಡಾಯವಾಗಿ ಸೀರೆ ಉಡುವಂತೆ ರಾಜ್ಯ ಕಾಲೇಜು ಶಿಕ್ಷಣ ಇಲಾಖೆ ಸುತ್ತೋಲೆ 

ಹೊರಡಿಸಿದೆ.ಕಾಲೇಜುಗಳಲ್ಲಿ ಉಪನ್ಯಾಸಕಿಯರು ಕಡ್ಡಾಯವಾಗಿ ಸೀರೆ ಉಡಬೇಕು, ಕಾಲೇಜುಗಳಲ್ಲಿ ಮೊಬೈಲ್ ಬಳಸುವುದಕ್ಕೆ

ಉಪನ್ಯಾಸಕಿಯರಿಗೆ ನಿಷೇಧ ಹೇರಲಾಗಿದೆ ಎಂದು ಸುತ್ತೋಲೆ ಹೊರಡಿಸಲಾಗಿದೆ.  

ನಾಲ್ಕು ತಿಂಗಳುಗಳ ಹಿಂದೆ ಡ್ರೆಸ್ ಕೋಡ್ ಬಗ್ಗೆ ನಿರ್ಧರಿಸಲಾಗಿತ್ತು. ಆದರೆ, ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ 

ಶಿಕ್ಷಣ ಇಲಾಖೆ ಸುತ್ತೋಲೆ ಕೈ ಬಿಡಲಾಗಿತ್ತು ಎಂದು ಇಲಾಖೆಯ ಮೂಲಗಳು ತಿಳಿಸಿವೆ.ಹಳೆಯ ಆದೇಶಕ್ಕೆ ಮತ್ತೆ ಜೀವ 

ತಂದ ಶಿಕ್ಷಣ ಇಲಾಖೆ ಉನ್ನತ ಕಾಲೇಜುಗಳಿಗೆ ಸುತ್ತೋಲೆ ಹೊರಡಿಸಿ ತಕ್ಷಣದಿಂದಲೇ ಜಾರಿಗೆ ತರುವಂತೆ ಆದೇಶ ನೀಡಿದೆ. 

Edited By

venki swamy

Reported By

Sudha Ujja

Comments