ರಾಜ್ಯದಲ್ಲಿ ಮುಂಗಾರು ಚುರುಕು

05 Jul 2017 6:33 PM | General
549 Report

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಂಡು ಜಲಾಶಯಗಳ ಒಳಹರಿವು ಹೆಚ್ಚಳವಾಗಿದ್ದು, ಇನ್ನು ಮೂರು ನಾಲ್ಕು 

ದಿವಸ ಕರಾವಳಿ ಸೇರಿ ಕೆಲವು ಪ್ರದೇಶಗಳಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ.  

ರಾಜ್ಯದ ಕರಾವಳಿ, ದಕ್ಷಿಣ ಮತ್ತು ಉತ್ತರ ಒಳನಾಡಿನ ಅಲಲ್ಲಿ ಮಳೆಯಾಗಿದ್ದು, ಮುಂದಿನ 3-4 ಗಂಟೆಗಳಲ್ಲಿ ದಕ್ಷಿಣ ಕನ್ನಡ, ಉಡುಪಿ, 

ಉತ್ತರಕನ್ನಡ , ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಜುಲೈ 9ರವರೆಗೂ ಮಳೆ 

ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  

ಇಡೀ ರಾಜ್ಯಾದ್ಯಂತ ಒಂದು ದಿನ ಉತ್ತಮ ಮಳೆಯಾದರೆ ಇಂಧನ ಇಲಾಖೆಗೆ 100 ಕೋಟಿ ಉಳಿತಾಯವಾಗಲಿದೆ. ಈವರೆಗೆ 

ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿರುವುದು ಆತಂಕ ಮೂಡಿಸಿದೆ. ಇನ್ನು ಸ್ವಲ್ಪ ದಿನ ಕಾದು ನೋಡಲಾಗುವುದು. ಮುಂದಿನ 

ಪರಿಸ್ಥಿತಿ ನೋಡಿಕೊಂಡು ವಿದ್ಯುತ್ ಪೂರೈಕೆ ವ್ಯವಸ್ಥೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಇಂಧನ ಸಚಿವ ಡಿ.ಕೆ 

ಶಿವಕುಮಾರ್ ಹೇಳಿದ್ದಾರೆ.  

Edited By

venki swamy

Reported By

Sudha Ujja

Comments