ಜುಲೈ 12ರಂದು ಪೆಟ್ರೋಲ್ ಬಂಕ್ ಬಂದ್

04 Jul 2017 12:19 PM | General
526 Report

ನವದೆಹಲಿ: ಅಖಿಲ ಭಾರತ ಪೆಟ್ರೋಲ್ ವ್ಯಾಪಾರಿಗಳ ಸಂಘ ಇದೇ ಜುಲೈ 12ರಂದು ವಿವಿಧ ಬೇಡಿಕೆಗಳ ಒತ್ತಾಯಿಸಿ ಪೆಟ್ರೋಲ್ ಬಂಕ್ ಗಳನ್ನು ಬಂದ್ ಮಾಡಲು ನಿರ್ಧರಿಸಿದೆ. <p>ಜುಲೈ 12ರಂದು ದೇಶದಾದ್ಯಂತ ಪೆಟ್ರೋಲ್ ಬಂಕ್ ಬಂದ್ ಆಗಲಿದ್ದು, ಪೆಟ್ರೋಲ್ ಪಂಪ್ ಗಳಲ್ಲಿ ಶೇ 100 ರಷ್ಟು ಸ್ವಯಂಚಾಲಿತವ್ಯವಸ್ಥೆಯನ್ನು ಸ್ಥಾಪಿಸುವಲ್ಲಿ ಮತ್ತು ಪ್ರತಿದಿನ ದರ ಪರಿಷ್ಕರಣೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ತೈಲ ಮಾರಾಟ ಕಂಪನಿಗಳು ವಿಫಲವಾಗಿರುವುದನ್ನು ವಿರೋಧಿಸಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಆದ್ದರಿಂದ ದೇಶದೆಲ್ಲೆಡೆ ಪೆಟ್ರೋಲ್ ಬಂಕ್ ಗಳು ಜುಲೈ 5ರಂದು ಖರೀದಿ ಸ್ಥಗಿತ ಆಚರಣೆ ಮಾಡಲಿದ್ದು, ಬಳಿಕ ಜುಲೈ 12ರಂದು ಪೆಟ್ರೋಲ್ ಬಂಕ್ ಸಂಪೂರ್ಣ ಬಂದ್ ಆಚರಿಸಲಿವೆ ಎಂದು ಅಖಿಲ ಭಾರತ ಪೆಟ್ರೋಲ್ ವ್ಯಾಪಾರಿಗಳ ಸಂಘ ತಿಳಿಸಿದೆ.</p>

Edited By

venki swamy

Reported By

Sudha Ujja

Comments