ಕಂಬಳ ಕ್ರೀಡೆ ಸುಗ್ರೀವಾಜ್ಞೆಗೆ ರಾಷ್ಟ್ರಪತಿಗಳ ಅಂಕಿತ

04 Jul 2017 12:13 PM | General
679 Report

ನವದೆಹಲಿ:ಕರಾವಳಿಯಸಾಂಪ್ರದಾಯಿಕಕ್ರೀಡೆಕಂಬಳಕ್ಕೆರಾಜ್ಯಸರ್ಕಾರಹೊರಡಿಸಿದ್ದಸುಗ್ರೀವಾಜ್ನೆಗೆರಾಷ್ಟ್ರಪತಿಅಂಕಿತಹಾಕಿದ್ದು, ಈಮೂಲಕ ಕಂಬಳ ಉಳಿವಿಗಾಗಿನಡೆದಹೋರಾಟಕ್ಕೆಜಯಸಿಕ್ಕಂತಾಗಿದೆ.

ಪ್ರಾಣಿ ಹಿಂಸೆಯ ಕಾರಣ ನೀಡಿ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆಯನ್ನು ಸುಪ್ರಿಂ ನಿಷೇಧಿಸಿತ್ತು.

ಇದೇ ಮಾನದಂಡವನ್ನು ಅನ್ವಯಿಸಿ ರಾಜ್ಯದ ಕಂಬಳ ಕ್ರೀಡೆಗೂ ನಿಷೇಧದ ಬಿಸಿ ತಟ್ಟಿತ್ತು. ಬಳಿಕ ತಮಿಳುನಾಡಿನಲ್ಲಿ ಸರ್ಕಾರ ಜಲ್ಲಿಕಟ್ಟು ಕ್ರೀಡೆಗೆ ಮಾನ್ಯತೆ ನೀಡಲು ಕಾನೂನು ಮೊರೆ ಹೋಗಿತ್ತು. ಅದೇ ರೀತಿ ಕರ್ನಾಟಕ ಕೂಡ ಜನರ ಹೋರಾಟಕ್ಕೆ ಮಣಿದು ಕಂಬಳಕ್ಕೆ ಅವಕಾಶ ನೀಡುವ ಕಾಯ್ದೆಗೆ ತಿದ್ದುಪಡಿ ತರಲು ಜ.28ಕ್ಕೆ ಒಪ್ಪಿಗೆ ನೀಡಿತ್ತು. ಬಳಿಕ ಫೆಬ್ರವರಿ 13ಕ್ಕೆ ಕರ್ನಾಟಕ ವಿಧಾನಮಂಡಲ ತಿದ್ದುಪಡಿಕಾಯ್ದೆಗೆ ಅಂಗೀಕಾರ ನೀಡಿ, ರಾಜ್ಯಪಾಲಕ ಅಂಕಿತಕ್ಕೆ ಕಳುಹಿಸಲಾಗಿತ್ತು. ಆದರೆ ರಾಜ್ಯಪಾಲರು ಕಾಯ್ದೆಗೆ ರಾಷ್ಟ್ರಪತಿಗಳ ಒಪ್ಪಿಗೆಗೆ ಕಳುಹಿಸಿಕೊಟ್ಟರು. 

ಕಂಬಳ ಕ್ರೀಡೆಗೆ ಸುಗ್ರೀವಾಜ್ನೆ ಪ್ರಕಟವಾದ ಕಾರಣ ಕಂಬಳ ಕ್ರೀಡೆ ಆಯೋಜನೆಗೆ ಯಾವುದೇ ಅಡ್ಡಿ ಆತಂಕವಿಲ್ಲ. ಎರಡೂ ಕಡತಗಳು ರಾಜ್ಯಕ್ಕೆ ಬಂದ ಬಳಿಕ ಸಂಸದೀಯ ಕಾರ್ಯದರ್ಶಿ, ಹಾಗೂ ರಾಜ್ಯಪಾಲರು, ಮುಖ್ಯಮಂತ್ರಿ, ಕಾರ್ಯದರ್ಶಿಗೆ ರವಾನೆಯಾಗಲಿದೆ. ರಾಜ್ಯಕ್ಕೆ ಕಳುಹಿಸಿರು ಕಂಬಳ ತಿದ್ದುಪಡಿ ಮಸೂದೆ ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಗಜೆಟ್ ನೋಟಿಫಿಕೇಷನ್ ಆಗುವ ಮೂಲಕ ಕಾನೂನಾಗಿ ಮಾರ್ಪಾಡಾಗಲಿದೆ.

 

Edited By

venki swamy

Reported By

Sudha Ujja

Comments