ಐತಿಹಾಸಿಕ ಜಿಎಸ್ ಟಿ ಜಾರಿ

01 Jul 2017 1:34 PM | General
435 Report

ನವದೆಹಲಿ:ಏಕರೂಪ ತೆರಿಗೆ ವ್ಯವಸ್ಥೆಯಾದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ)ಗೆ ಮಧ್ಯರಾತ್ರಿ ಚಾಲನೆ ದೊರೆತಿದೆ. ಈ ಮೂಲಕ ನೈತಿಹಾಸಿಕ ಜಿಎಸ್ ಟಿ ಯುಗಾರಂಭವಾಗಿದೆ. ಜೂ.30ರ ಮಧ್ಯರಾತ್ರಿ ಸಂಸತ್ ವಿಶೇಷ ಅಧಿವೇಶನದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಪ್ರಧಾನಿ ಮೋದಿ ಜಿಎಸ್ ಟಿಗೆ ಚಾಲನೆ ನೀಡಿದರು.

ಇದೇ ವೇಳೆ ಜಂಟಿ ವಿಶೇಷ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಜಿಎಸ್ ಟಿ ಯಾವುದೇ ಒಂದು ಸರ್ಕಾರ ಅಥವಾ ಪಕ್ಷದ ಸಾಧನೆಯಲ್ಲ, ಇದು ಎಲ್ಲರ ಒಗ್ಗಟ್ಟಿನ ಶ್ರಮದ ಫಲವಾಗಿದೆ. ಹಲವು ತಜ್ಞರ ಮಾರ್ಗದರ್ಶನದಲ್ಲಿ ಜಿಎಸ್ ಟಿ ರೂಪುಗೊಂಡಿರುವ ಜಿಎಸ್ ಟಿ ಜಾರಿಯ ಮೂಲಕ ಭಾರತಕ್ಕೆ ಆರ್ಥಿಕ ಸ್ವಾತಂತ್ರ್ಯ ದೊರೆತಿದೆ ಎಂದು ಹೇಳಿದ್ದಾರೆ.

 ಆಗಸ್ಟ್‌ 15ರಂದು ಮಧ್ಯರಾತ್ರಿ ದೊರೆತ ಸ್ವಾತಂತ್ರ್ಯ ದೇಶವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯಿತು. ಈಗ ಅದೇ ಪವಿತ್ರ ಸ್ಥಳದಲ್ಲಿ ಮಧ್ಯರಾತ್ರಿ ಜಾರಿಯಾಗುತ್ತಿರುವ ಹೊಸ ತೆರಿಗೆ ವ್ಯವಸ್ಥೆ ದೇಶವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯಲಿದೆ. ನವ ಭಾರತದ ನಿರ್ಮಾಣದಲ್ಲಿ ಜಿಎಸ್‌ಟಿ ಜಾರಿಯ ಈ ಸಂದರ್ಭ ಕೂಡ ಒಂದು ಐತಿಹಾಸಿಕ ಕ್ಷಣವಾಗಲಿದೆ ಎಂದು ಅಭಿಪ್ರಾಯಪಟ್ಟರು. ಅಲ್ಲದೇ ಜಿಎಸ್ ಟಿಗೆ ಹೊಸ ವ್ಯಾಖ್ಯಾನ ನೀಡಿರುವ ಮೋದಿ ಇದು ಗೂಡ್ ಆಂಡ್ ಸಿಂಪಲ್ ಟ್ಯಾಕ್ಸ್ ಎಂದು ಹೇಳಿದ್ದಾರೆ.

Edited By

venki swamy

Reported By

Sudha Ujja

Comments