ಕೆಂಪೇಗೌಡರ ಜಯಂತಿಗೆ ಸರ್ಕಾರದ ಕೊಡುಗೆ

27 Jun 2017 5:22 PM | General
899 Report

ನಾಡಿನೆಲ್ಲೆಡೆ ಕೆಂಪೇಗೌಡರ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಹಲವೆಡೆ ಸಿಹಿ ನೀಡಿ ಸಂಭ್ರಮಾಚರಣೆ ಮಾಡಿದರೆ ಕೆಲವೆಡೆ ಕೆಂಪೇಗೌಡರ ಪ್ರತಿಮೆಗೆ ಹಾರ ಹಾಕಿ ಹಾಗು ಸಮಾರಂಭಗಳನ್ನು ಮಾಡಿ ಗಣ್ಯರಿಂದ ಬಾಷಣ ಮಾಡಿಸುವ ಮೂಲಕ ಆಚರಿಸಿದರು.

ಸರ್ಕಾರ ಕೂಡ ಕೆಂಪೇಗೌಡರ ದಿನಾಚರಣೆಯನ್ನು ವಿಧಾನ ಸೌಧದ ಬೊನ್ಕ್ಯೂಟ್ ಸಭಾಂಗಣದಲ್ಲಿ ಆಚರಣೆ ಮಾಡಿದರು.

ಈ ವೇಳೆ ಸನ್ಮಾನ್ಯ ಸಿದ್ದರಾಮಯ್ಯನವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಕೆಂಪೇಗೌಡರ ಪ್ರತಿಮೆ ನಿರ್ಮಿಸುವುದಾಗಿ ಘೋಷಣೆ ಮಾಡಿ ಗೌಡರ ಅಭಿಮಾನಿಗಳ ಮೊಗದಲಿ ಸಂತಸ ಉಂಟು ಮಾಡಿದರು.

Edited By

Shruthi G

Reported By

Shruthi G

Comments