ಇಸ್ರೋದಿಂದ ಕಾರ್ಟೊಸ್ಯಾಟ್ ಉಪಗ್ರಹ ಉಡಾವಣೆ

23 Jun 2017 12:45 PM | General
705 Report

ಆಂಧ್ರಪ್ರದೇಶ: ಇವತ್ತು ಬೆಳಿಗ್ಗೆ 9.29ಕ್ಕೆ ಸರಿಯಾಗಿ ಶ್ರೀಹರಿಕೋಟಾದಿಂದ ಸತೀಶ್  ಧವನ್  ಬಾಹ್ಯಾಕಾಶ್ ಕೇಂದ್ರದಿಂದ ಪಿಎಸ್ಎಲ್ ವಿ ಮೂಲಕ ಒಟ್ಟು 31 ಗ್ರಹಗಳ ಉಡಾವಣೆ ಮಾಡಲಾಗಿದೆ.ಕಾರ್ಟೋಸ್ಯಾಟ್ 2 ಮತ್ತು ವಿಶ್ವವಿದ್ಯಾಲಯವೊಂದರ ಚಿಕ್ಕ ಉಪಗ್ರಹವಿದ್ದು, ಇನ್ನುಳಿದ 29 ಉಪಗ್ರಹಗಳು 14 ವಿವಿಧ ದೇಶಗಳಿಗೆ ಸೇರಿದ್ದಾಗಿವೆ.

ಪಿಎಸ್ ಎಲ್ ವಿ ರಾಕೆಟ್ ನ ಎಕ್ಸೆಲ್ ಮಾದರಿಯು, 712 ಕೆಜಿ ತೂಕದ ಕಾರ್ಟೋಸಾಟ್ 2 ಸರಣಿ ಉಪಗ್ರಹ ಮತ್ತು 30 ಸಹಪ್ರಯಾಣಿಕ ಸ್ಯಾಟಲೈಟ್ ಗಳನ್ನು ಒಟ್ಟಾಗಿ ಹೊತ್ತೊಯ್ದಿದೆ. 30 ಉಪಗ್ರಹಗಳ ತೂಕ 243 ಕೆಜಿ ಹಾಗೂ ಕಾರ್ಟೋಸ್ಯಾಟ್ ಉಪಗ್ರಹ ಸೇರಿದಂತೆ ೩೧ ಉಪಗ್ರಹಗಳ ಒಟ್ಟು ತೂಕ 955 ಕೆಜಿ ಇದೆ ಎಂದು ಇಸ್ರೋ ಹೇಳಿದೆ.

Edited By

venki swamy

Reported By

Sudha Ujja

Comments