3ಜಿ ಗ್ರಾಹಕರಿಗೆ ಸಿಗ್ತಿರೋ ಇಂಟರ್ನೆಟ್ ಸ್ಪೀಡ್ ಎಷ್ಟು ಗೊತ್ತಾ?

02 Jun 2017 2:33 PM | General
919 Report

ಭಾರತದಲ್ಲಿ ದಿನೇ ದಿನೇ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಬಹುತೇಕರು ಮೊಬೈಲ್ ನಲ್ಲೇ ಇಂಟರ್ನೆಟ್ ಬಳಸುತ್ತಿರುವ ಕಾರಣ ವೇಗವಾಗಿ ಇಂಟರ್ನೆಟ್ ಸಂಪರ್ಕ ಪಡೆಯಲು 3 ಜಿ, 4 ಜಿ ಸಿಮ್ ಬಳಸುತ್ತಿದ್ದಾರೆ.

ಇಂಟರ್ನೆಟ್ ಸೇವೆ ನೀಡುತ್ತಿರುವ ಟೆಲಿಕಾಂ ಕಂಪನಿಗಳು 3 ಜಿ ಹಾಗೂ 4 ಜಿ ಇಂಟರ್ನೆಟ್ ವೇಗದ ಕುರಿತು ನೀಡುವ ಮಾಹಿತಿ ವಾಸ್ತವದಲ್ಲಿ ಲಭ್ಯವಾಗುತ್ತಿಲ್ಲ. ಹೀಗಾಗಿ ಗ್ರಾಹಕರು ಇಂಟರ್ನೆಟ್ ಸ್ಪೀಡ್ ಕುರಿತು ಅಸಮಾಧಾನ ವ್ಯಕ್ತಪಡಿಸುತ್ತಲೇ ಇರುತ್ತಾರೆ.

ದೂರಸಂಪರ್ಕ ನಿಯಂತ್ರಣಾ ಪ್ರಾಧಿಕಾರ (ಟ್ರಾಯ್) ದ mySpeed ಆಪ್ ನೆರವಿನಿಂದ ಹಲವು 3 ಜಿ ಇಂಟರ್ನೆಟ್ ಬಳಕೆದಾರರು ಪರೀಕ್ಷಿಸಿದ ವೇಳೆ ವೇಗ ಕೇವಲ 1 mbps ಇರುವುದು ಕಂಡು ಬಂದಿದೆ. ವಾಸ್ತವವಾಗಿ 2 ಜಿ ಇಂಟರ್ನೆಟ್ ವೇಗ 0.5 mbps, 3 ಜಿ ಇಂಟರ್ನೆಟ್ ವೇಗ 42 mbps ಹಾಗೂ 4 ಜಿ ಇಂಟರ್ನೆಟ್ ವೇಗ 150 mbps ಇರಬೇಕಾಗಿದೆ.

ಆದರೆ ಎಲ್ಲರಿಗೂ ಈ ವೇಗದ ಇಂಟರ್ನೆಟ್ ಸೌಲಭ್ಯ ಸಿಗುತ್ತಿಲ್ಲ. ಇದುವರೆಗೂ ಟೆಲಿಕಾಂ ಕಂಪನಿಗಳು ಈ ಕುರಿತು ತಾಂತ್ರಿಕ ಕಾರಣ ಸೇರಿದಂತೆ ಹತ್ತು ಹಲವು ಕಾರಣ ನೀಡುತ್ತಿದ್ದು, ಇನ್ನು ಮುಂದೆ ಇದಕ್ಕೆ ಕಡಿವಾಣ ಬೀಳಲಿದೆ.ಮೊಬೈಲ್ ಇಂಟರ್ನೆಟ್ ಬಳಕೆದಾರರು ತಮ್ಮ 2 ಜಿ, 3 ಜಿ ಹಾಗೂ 4 ಜಿ ಇಂಟರ್ನೆಟ್ ವೇಗದಲ್ಲಿ ಸಮಸ್ಯೆಯನ್ನೆದುರಿಸಿದರೆ ದೂರಸಂಪರ್ಕ ನಿಯಂತ್ರಣಾ ಪ್ರಾಧಿಕಾರಕ್ಕೆ ದೂರು ಸಲ್ಲಿಸಬಹುದಾಗಿದೆ.

 

Edited By

Shruthi G

Reported By

Shruthi G

Comments