500 ರೂಪಾಯಿ ಹಳೆ ನೋಟಿನಿಂದ ವಿದ್ಯುತ್ ಉತ್ಪಾದಿಸಿದ ವಿದ್ಯಾರ್ಥಿ, PMO ಗಮನಸೆಳೆದ ಆವಿಷ್ಕಾರ

23 May 2017 1:06 PM | General
698 Report

ಒಡಿಶಾದ ವಿದ್ಯಾರ್ಥಿಯೊಬ್ಬ 500 ರೂಪಾಯಿಯ ಹಳೆ ನೋಡುಗಳಿಂದ ವಿದ್ಯುತ್ ಉತ್ಪಾದಿಸುವ ವಿಚಾರವಾಗಿ ಚರ್ಚೆಯಲ್ಲಿದ್ದಾನೆ. ನುವಾಪಾದ ಜಿಲ್ಲೆಯ 17 ವರ್ಷದ ವಿದ್ಯಾರ್ಥಿಯೊಬ್ಬ ಹಳೆಯ 500 ರೂಪಾಯಿ ನೋಟುಗಳಿಂದ ವಿದ್ಯುತ್ ಉತ್ಪಾದಿಸುವ ತಂತ್ರ ತನಗೆ ತಿಳಿದಿದೆ ಎಂದು ಹೇಳಿಕೊಂಡಿದ್ದಾನೆ. ಈತನ ಈ ಆವಿಷ್ಕಾರದ ಸುದ್ದಿ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೂ ತಲುಪಿದೆ.

ಇಲ್ಲಿನ ಕರಿಯರ್ ಕಾಲೇಜಿನಲ್ಲಿ ವ್ಯಾಸಂಗ ನಡೆಸುತ್ತಿರುವ ಲಕ್ಷ್ಮಣ್ ದುಂಡಿ ಎಂಬ ವಿದ್ಯಾರ್ಥಿಯೇ 500 ರೂಪಾಯಿ ಹಳೆ ನೋಟುಗಳಿಂದ ವಿದ್ಯುತ್ ತಯಾರಿಸುವುದಾಗಿ ಹೇಳಿಕೊಂಡವನು. ಈತ ಕೇವಲ ಒಂದು ನೋಟಿನಿಂದ 5 ವೋಲ್ಟ್ ವಿದ್ಯುತ್ ತಯಾರಿಸುತ್ತಾನಂತೆ.

ಈತನ ಈ ಆವಿಷ್ಕಾರದ ವಿಚಾರ ಪ್ರಧಾನ ಮಂತ್ರಿ ಕಾರ್ಯಾಲಯವನ್ನೂ ತಲುಪಿದೆ. ಸದ್ಯ ಒಡಿಶಾದ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯಿಂದ ಈ ಪ್ರಾಜೆಕ್ಟ್'ಗೆ ಸಂಬಂಧಿಸಿದ ವರದಿ ನೀಡಲು ಪ್ರಧಾನಿ ಕಾರ್ಯಾಲಯ ಸೂಚನೆ ನೀಡಿದ. ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಯನ್ವಯ ಲಕ್ಷ್ಮಣ್ ವಿದ್ಯುತ್ ಉತ್ಪಾದಿಸಲು 500 ರೂಪಾಯಿ ಹಳೆ ನೋಟಿನಲ್ಲಿರುವ ಸಿಲಿಕಾನ್ ಕೋಟಿಂಗ್'ನ್ನು ಬಳಸುತ್ತಾನೆ ಎಂದು ತಿಳಿದು ಬಂದಿದೆ.

 ಈ ಕುರಿತಾಗಿ ಮಾಹಿತಿ ನೀಡಿರುವ ಲಕ್ಞ್ಮಣ್ ನೋಟುಗಳನ್ನು ಹರಿದರಷ್ಟೇ ಈ ಕೋಟ್ ಕಾಣಿಸಿಕೊಳ್ಳುತ್ತದೆ. ಬಳಿಕ ಈ ಕೋಟಿಂಗ್'ನ್ನು ಬಿಸಿಲಿಗೆ ಒಣಗಿಸಬೇಕು. ತದನಂತರ ಇದನ್ನು ಒಂದು ವಿದ್ಯುತ್ ತಂತಿಯ ಸಹಾಯದಿಂದ ಟ್ರಾನ್ಸ್ಫರ್ಮರ್'ಗೆ ಜೋಡಿಸುವುದರಿಂದ ವಿದ್ಯುತ್ ಉತ್ಪಾದನೆಯಾಗುತ್ತದೆ ಎಂದು ತಿಳಿಸಿದ್ದಾನೆ.ಈಗಾಗಲೇ ಈ ವಿದ್ಯಾರ್ಥಿ ಒಂದು ಟ್ರಾನ್ಸ್ಫರ್'ಮರ್ ತಯಾರಿಸಿದ್ದು, ಇದು ಸಿಲಿಕಾನ್ ಪ್ಲೇಟ್'ನಿಂದ ಉತ್ಪಾದನೆಯಾದ ವಿದ್ಯುತ್'ನ್ನು ಸಂಗ್ರಹಿಸಿಡುವ ಸಾಮರ್ಥ್ಯ ಹೊಂದಿರುವುದಾಗಿ ತಿಳಿದು ಬಂದಿದೆ.

ಇನ್ನು ಪ್ರಧಾನಿ ಕಾರ್ಯಾಲಯದಿಂದ ಬಂದಿರುವ ಸೂಚನೆ ಕುರಿತಾಗಿ ಮಾತನಾಡಿದ ಲಕ್ಞ್ಮಣ್ ಒಂದು ವೇಳೆ ಪ್ರಧಾನಿ ಕಾರ್ಯಾಲಯಕ್ಕೆ ನನ್ನ ಈ ಆವಿಷ್ಕಾರ ಇಷ್ಟವಾದರೆ ಅದಕ್ಕಿಂತ ಹೆಚ್ಚಿನ ಗೌರವ ಬೇರೊಂದಿಲ್ಲ ನೋಟ್ ಬ್ಯಾನ್ ಬಳಿಕ 500 ರೂಪಾಯಿಯ ಹಳೆ ನೋಟುಗಳು ಉಪಯೋಗಕ್ಕಿಲ್ಲದೆ ಮೂಲೆ ಸೇರಿವೆ.

ಹೀಗಿರುವಾಗ ಇವುಗಳಿಂದ ವಿದ್ಯುತ್ ತಯಾರಿಸಿದರೆ ಸರ್ಕಾರಕ್ಕೆ ಲಾಭವಾಗಲಿದೆ ಎಂದಿದ್ದಾನೆ. ಈಗಾಗಲೇ ಈ ವಿದ್ಯಾರ್ಥಿ ತನ್ನ ಈ ಆವಿಷ್ಕಾರವನ್ನು ಕಾಲೇಜಿನಲ್ಲಿ ಪ್ರದರ್ಶಿಸಿದ್ದಾನೆ ಎಂಬ ಮಾತುಗಳೂ ಕೇಳಿ ಬಂದಿವೆ. ಈತ ಈ ಆವಿಷ್ಕಾರವನ್ನು ಕೇವಲ 15 ದಿನಗಳಲ್ಲಿ ಮಾಡಿದ್ದನಂತೆ.

Edited By

Shruthi G

Reported By

Shruthi G

Comments