ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ: ನಟ ದಿಗಂತ್ಗೆ ಮತ್ತೊಮ್ಮೆ ನೋಟಿಸ್..!
ಸೆ.17ರಂದು ಸ್ಯಾಂಡಲ್ವುಡ್ನ ತಾರಾದಂಪತಿ ಐಂದ್ರಿತಾ ರೇ ಮತ್ತು ದಿಗಂತ್ ಇಬ್ಬರೂ ಸಿಸಿಬಿ ವಿಚಾರಣೆ ಎದುರಿಸಿದ್ದರು. ಇದೀಗ ದಿಗಂತ್ಗೆ ಸಿಸಿಬಿ ಎರಡನೇ ಬಾರಿ ನೋಟಿಸ್ ಜಾರಿ ಮಾಡಿದ್ದು, ಬಂಧನ ಭೀತಿ ಆವರಿಸಿದೆ.
ಇಂದು ಬೆಳಗ್ಗೆ 11 ಗಂಟೆಗೆ ಸಿಸಿಬಿ ಅಧಿಕಾರಿ ಪುನೀತ್ ಎದುರು ವಿಚಾರಣೆಗೆ ಹಾಜರಾಗುವಂತೆ ನಟ ದಿಗಂತ್ ಗೆ ಸೂಚನೆ ನೀಡಲಾಗಿದೆ. ಡ್ರಗ್ಸ್ ಪ್ರಕರಣ ಸಂಬಂಧ ಸೆ. 16 ರಂದು ದಿಗಂತ್ ಹಾಗೂ ಪತ್ನಿ ಐಂದ್ರಿತಾ ಇಬ್ಬರೂ ವಿಚಾರಣೆಗೆ ಹಾಜರಾಗಿದ್ದರು. ಅಲ್ಲದೇ 2-3 ದಿನಗಳಲ್ಲಿ ಪೂರಕ ದಾಖಲೆ ಒದಗಿಸುವುದಾಗಿ ತಿಳಿಸಿದ್ದರು. ಆದರೆ ಈವರೆಗೆ ದಾಖಲೆ ಒದಗಿಸಿಲ್ಲ ಎನ್ನಲಾಗಿದೆ.
Comments